ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರೆನ್ಸ್ ಬಿಷ್ಣೋಯ್‌ ಗುಜರಾತ್‌ ಎಟಿಎಸ್‌ ವಶಕ್ಕೆ

Published 25 ಏಪ್ರಿಲ್ 2023, 15:55 IST
Last Updated 25 ಏಪ್ರಿಲ್ 2023, 15:55 IST
ಅಕ್ಷರ ಗಾತ್ರ

ಅಹಮದಾಬಾದ್‌: ಗಡಿಯಾಚೆಯಿಂದ ಮಾದಕ ವಸ್ತು ಕಳ್ಳಸಾಗಣೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ನನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ತಿಹಾರ್‌ ಜೈಲಿನಲ್ಲಿದ್ದ ಬಿಷ್ಣೋಯ್‌ನನ್ನು ದೆಹಲಿಯ ನ್ಯಾಯಾಲಯವು ಎಟಿಎಸ್‌ ವಶಕ್ಕೆ ನೀಡಿದೆ.

ಕಳೆದ ವರ್ಷ ಗುಜರಾತ್‌ ತೀರದ ಸಮೀಪ ಪಾಕಿಸ್ತಾನದ ಮೀನುಗಾರಿಕಾ ದೋಣಿಯಿಂದ 40 ಕೆ.ಜಿ. ಹೆರಾಯಿನ್‌ ವಶಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಬಿಷ್ಣೋಯ್‌ನನ್ನು ವಶಕ್ಕೆ ನೀಡಬೇಕೆಂದು ಎಟಿಎಸ್‌ ನ್ಯಾಯಾಲಯವನ್ನು ಕೋರಿತ್ತು.

ಗುಜರಾತ್‌ ಎಟಿಎಸ್‌ ಮತ್ತು ಕರಾವಳಿ ರಕ್ಷಣಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಹೆರಾಯಿನ್‌ ವಶಪಡಿಸಿಕೊಂಡಿದ್ದವು.

ಈ ಹೆರಾಯಿನ್‌ ಅನ್ನು ದೆಹಲಿ ನಿವಾಸಿಗಳಾದ ಸರ್ತಾಜ್‌ ಮಲಿಕ್‌ ಮತ್ತು ಜಗ್ಗಿ ಸಿಂಗ್‌ ಎಂಬುವವರಿಗಾಗಿ ತರಲಾಗಿತ್ತು. ಅವರು ದೆಹಲಿ ಮತ್ತು ಪಂಜಾಬ್‌ಗೆ ಇದನ್ನು ರಸ್ತೆಯ ಮೂಲಕ ಸಾಗಿಸಲು ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಬಳಿಕ ಈ ಇಬ್ಬರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT