ಅಹಮದಾಬಾದ್: ಗುಜರಾತ್ನ ಮುಂದ್ರಾ ಕರಾವಳಿಯಲ್ಲಿ ಹಡಗೊಂದರಲ್ಲಿದ್ದ ₹1,150 ಕೋಟಿ ಮೌಲ್ಯದ 115 ಕೆ.ಜಿ ಕೊಕೇನ್ ಅನ್ನು ಭಾರತೀಯ ಕರಾವಳಿ ಪಡೆ(ಐಸಿಜಿ) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ವಶಪಡಿಸಿಕೊಂಡಿವೆ.

‘ಸಾಗರ ಮಾರ್ಗವಾಗಿ ಮಾದಕವಸ್ತು ಸಾಗಣೆ ನಡೆಯುತ್ತಿರುವ ಬಗ್ಗೆ ದೊರಕಿದ ಗುಪ್ತಚರ ಮಾಹಿತಿಯ ಆಧಾರದಲ್ಲಿ ಸೋಮವಾರ ಮತ್ತು ಮಂಗಳವಾರ ಕಾರ್ಯಾಚರಣೆ ನಡೆಸಲಾಗಿತ್ತು’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಶೋಧದ ವೇಳೆ ಎಂವಿ ಯುರೋಪ್ ಎಂಬ ಹಡಗಿನಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಪತ್ತೆಯಾಗಿತ್ತು. ಹಡಗಿನಿಂದ ಕೆಲವು ಚೀಲಗಳನ್ನು ಎಸೆಯುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಐದು ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

‘ಇವುಗಳಲ್ಲಿ ತಲಾ ಒಂದು ಕೆ.ಜಿ ಬಿಳಿ ಪೌಡರ್ ರೀತಿಯ ವಸ್ತುವಿರುವ 115 ಪ್ಯಾಕೆಟ್ಗಳಿದ್ದವು. ಅದು ಕೊಕೇನ್ ಎಂದು ಪ್ರಾಥಮಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಹಡಗನ್ನು ಬಂದರಿಗೆ ತರಲಾಗಿದ್ದು, ಐಸಿಜಿ ಮತ್ತು ಎಟಿಎಸ್ ಜಂಟಿಯಾಗಿ ತನಿಖೆ ನಡೆಸುತ್ತಿದ್ದಾವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.