ಅಹಮದಾಬಾದ್: ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರನ್ನು ಅಳಿಸಲು ನಡೆಸಿದ ಪಿತೂರಿಯ ಕುರಿತು ತನಿಖೆ ನಡೆಸುವಂತೆ ಕೋರಿ ಎರಡು ಪ್ರತ್ಯೇಕ ಅರ್ಜಿಗಳ ಕುರಿತಂತೆ ಗುಜರಾತ್ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.

‘ರಾಜ್ಯದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್ಐಆರ್) ಸಮಯದಲ್ಲಿ ಮತದಾರರ ಹೆಸರನ್ನು ಅಳಿಸಲು ಕೋರಿ ಸಾವಿರಾರು ಫಾರ್ಮ್–7 ಆಕ್ಷೇಪಣಾ ಅರ್ಜಿಗಳನ್ನು ದಾಖಲಿಸಲಾಗಿದೆ. ಈ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು’ ಎಂದು ಕೋರಿ ಅರ್ಜಿದಾರರು ಮನವಿ ಮಾಡಿದ್ದಾರೆ.

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್, ಮುಂದಿನ ವಿಚಾರಣೆಯನ್ನು ಜುಲೈ7ಕ್ಕೆ ನಿಗದಿಪಡಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ವ್ಯಕ್ತಿ ಹೆಸರು ಸೇರ್ಪಡೆಗೊಳಿಸುವುದನ್ನು ಆಕ್ಷೇಪಿಸಲು ಫಾರ್ಮ್–7 ಬಳಸಲಾಗುತ್ತದೆ. ನಿಯಮದ ಪ್ರಕಾರ, ಆಕ್ಷೇಪ ಸಲ್ಲಿಸುವ ವ್ಯಕ್ತಿಯು ಅದೇ ಕ್ಷೇತ್ರದ ಮತದಾರನಾಗಿರಬೇಕು. ಆಕ್ಷೇಪಣೆ ಸಲ್ಲಿಸಿದವರೇ ಈ ಕುರಿತು ಪುರಾವೆಗಳನ್ನು ಸಲ್ಲಿಸಬೇಕು. ಇಲ್ಲಿ ಮಾತ್ರ ಯಾವುದೇ ಮಾನದಂಡಗಳನ್ನು ಅನುಸರಿಸಲಾಗಿಲ್ಲ.

‘ದೊಡ್ಡ ಸಂಖ್ಯೆಯಲ್ಲಿ ಫಾರ್ಮ್–7 ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನೈಜ ಮತದಾರರು, ಅದರಲ್ಲಿಯೂ ಮುಸಲ್ಮಾನ ಮತದಾರರ ಹೆಸರನ್ನು ತೆಗೆದು ಹಾಕುವಂತೆ ಅರ್ಜಿ ಸಲ್ಲಿಸಲಾಗಿದೆ’ ಎಂದು ಅರ್ಜಿ ಸಲ್ಲಿಸಿರುವ ಪೈಕಿ ಒಬ್ಬರಾದ ಗಿರ್ ಸೋಮನಾಥ್ ಜಿಲ್ಲೆಯ ಕೊಡಿನರ್ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೆಹ್ದಿ ಹಸನ್ ಸೈಯದ್ ಮೆಹಮೂದ್ ನಕ್ವಿ ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-635068618

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.