ಹರಪನಹಳ್ಳಿ: ನಾಟಿ ವೈದ್ಯರನ್ನು ಸರ್ಕಾರಿ ಆಯುಷ್ ವಿಭಾಗದಡಿ ಸೇರಿಸಿ, ಅವರಿಗೆ ಅಧಿಕೃತ ‘ರಾಷ್ಟ್ರೀಯ ನೋಂದಣಿ ಸಂಖ್ಯೆ’ ಹಾಗೂ ‘ಗುರುತಿನ ಚೀಟಿ’ ನೀಡಬೇಕು ಎಂದು ಆಗ್ರಹಿಸಿದ ಇಲ್ಲಿಯ ಪಾರಂಪರಿಕ ನಾಟಿ ವೈದ್ಯರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಚಳವಳಿಗೆ ಮೂಲಕ ಮನವಿ ಸಲ್ಲಿಸಿದರು.

ಪತ್ರ ಚಳವಳಿಗೆ ಶನಿವಾರ ಚಾಲನೆ ನೀಡಿದ ರಾಜ್ಯ ಸಾಂಪ್ರದಾಯಿಕ ನಾಟಿ ವೈದ್ಯರು ‘ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ನಾಟಿ ವೈದ್ಯರಿಗೆ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲದಿರುವುದರಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸರ್ಕಾರ ನೆರವು ನೀಡಬೇಕು. ನಾಟಿ ವೈದ್ಯಕೀಯದಲ್ಲಿ ಜ್ಞಾನ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರದಿಂದಲೇ ಅಧಿಕೃತ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಾರಂಪರಿಕ ವೈದ್ಯಕೀಯ ಪದ್ಧತಿಗಳ ನಿರ್ವಹಣೆಗಾಗಿ ಆಯುಷ್ ಸಚಿವಾಲಯದಲ್ಲಿಯೇ ಒಂದು ಪ್ರತ್ಯೇಕ ಮಂಡಳಿ ಅಥವಾ ವಿಭಾಗ ಸ್ಥಾಪಿಸಬೇಕು. ಗ್ರಾಮೀಣ ಭಾಗಗಳಲ್ಲಿ ‘ನಾಟಿ ಚಿಕಿತ್ಸಾ ಕೇಂದ್ರ’ ಗಳನ್ನು ಸ್ಥಾಪಿಸಲು ಹಾಗೂ ನಾಟಿ ವೈದ್ಯರ ಸೇವೆಗೆ ಸರ್ಕಾರದಿಂದ ಆರ್ಥಿಕ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.

ಪತ್ರ ಚಳವಳಿಯಲ್ಲಿ ವಿ.ಸಣ್ಣ ಅಜ್ಜಯ್ಯ, ರಾಜಭಕ್ಷಿ ಹಗರಿಬೊಮ್ಮನಹಳ್ಳಿ, ಕೆ.ಕಲ್ಲಹಳ್ಳಿ ಗೋಣಿಬಸಪ್ಪ, ಮೈಲಾರಪ್ಪ, ಆನಂದಪ್ಪ ಚಿಗಟೇರಿ, ಮಹಮ್ಮದ ರಫೀಕ್, ಸುರೇಶ್ ಚಿಗಟೇರಿ, ಮಹ್ಮದ್ ಸಾಬ್, ಮಂಜುನಾಥ ಅರಸೀಕೆರೆ, ಕರಿಬಸಪ್ಪ, ಕೆ.ರವಿಕುಮಾರ, ಲಕ್ಷ್ಮಣ, ಬಸವನಗೌಡ, ಈರಮ್ಮ, ರಮೇಶ್, ಹೆಚ್.ನಾಗಪ್ಪ, ಕೆ.ಕೊಟ್ರಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-25-632934995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.