ಹರಿದ್ವಾರ: 2027ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ ಅರ್ಧ ಕುಂಭಮೇಳದಲ್ಲಿ ಮೂರು 'ಅಮೃತ' ಸ್ನಾನಗಳು ಸೇರಿದಂತೆ ಒಟ್ಟು 10 ಪ್ರಮುಖ ಸ್ನಾನಗಳು ನಡೆಯಲಿವೆ ಎಂದು ಮೇಳ ಆಡಳಿತ ಮಂಡಳಿಯು ಮಂಗಳವಾರ ಪ್ರಕಟಿಸಿದೆ.

2027ರ ಜನವರಿಯಿಂದ ಏಪ್ರಿಲ್ ವರೆಗೆ ನಡೆಯುವ ನಾಲ್ಕು ತಿಂಗಳ ಅವಧಿಯ ಮೇಳದಲ್ಲಿ ಮೊದಲ ಪವಿತ್ರ ಸ್ನಾನ ಜನವರಿ 14 ರಂದು (ಮಕರ ಸಂಕ್ರಾಂತಿ), ಎರಡನೆಯದು ಫೆ.6 ರಂದು (ಮೌನಿ ಅಮಾವಾಸ್ಯೆ), ಮೂರನೆಯದು ಫೆ.11 ರಂದು (ವಸಂತ ಪಂಚಮಿ), ನಾಲ್ಕನೆಯದು ಫೆ.20 ರಂದು (ಮಾಘ ಪೂರ್ಣಿಮೆ) ಮತ್ತು ಐದನೆಯದು ಮಾರ್ಚ್ 6 ರಂದು (ಮಹಾಶಿವರಾತ್ರಿ) ನಡೆಯಲಿದೆ ಎಂದು ಮೇಳ ಆಡಳಿತ ಮಂಡಳಿಯ ಅಧಿಕಾರಿ ಸೋನಿಕಾ ಸಿಂಗ್ ಹೇಳಿದ್ದಾರೆ.

ಅರ್ಧ ಕುಂಭದ ಆರನೇ ಪವಿತ್ರ ಸ್ನಾನ ಮಾರ್ಚ್ 8 ರಂದು (ಫಾಲ್ಗುಣ ಅಮಾವಾಸ್ಯೆ), ಏಳನೆಯದು ಏಪ್ರಿಲ್ 7 ರಂದು (ನವ ಸಂವತ್ಸರ), ಎಂಟನೆಯದು ಏಪ್ರಿಲ್ 14 ರಂದು, ಒಂಬತ್ತನೆಯದು ಏಪ್ರಿಲ್ 15 ರಂದು ಮತ್ತು ಅಂತಿಮ ಪವಿತ್ರ ಸ್ನಾನ ಏಪ್ರಿಲ್ 20 ರಂದು (ಚೈತ್ರ ಪೂರ್ಣಿಮೆ) ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರತಿ 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ, ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಇದು ಹಿಂದೂಗಳ ಸಾಮೂಹಿಕ ತೀರ್ಥಯಾತ್ರೆ ಇದಾಗಿದ್ದು, ಈ ನದಿಗಳಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ.

ಪೌರಾಣಿಕ ಹಿನ್ನೆಲೆ

ಸಮುದ್ರ ಮಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ದೇವತೆಗಳು ಮತ್ತು ರಾಕ್ಷಸರ ಮಧ್ಯೆ 12 ದಿನ ಯುದ್ಧ ನಡೆಯುತ್ತದೆ. ಯುದ್ಧ ನಡೆದಿರುವಾಗಲೇ ವಿಷ್ಣು ಅಮೃತದ ಕಲಶ (ಕುಂಭ) ತೆಗೆದುಕೊಂಡು ಹೋಗುವಾಗ ಅಮೃತದ ನಾಲ್ಕು ಹನಿಗಳು ಅಲಹಾಬಾದ್, ಹರಿದ್ವಾರ, ಉಜ್ಜಯನಿ ಮತ್ತು ನಾಸಿಕ್ಗಳಲ್ಲಿ ಬಿದ್ದಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರ (ಗಂಗಾ ನದಿ), ನಾಸಿಕ್ (ಗೋದಾವರಿ), ಉಜ್ಜಯಿ (ಕ್ಷಿಪ್ರಾ), ಅಲಹಾಬಾದ್ನ ಪ್ರಯಾಗ್ ರಾಜ್ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮ ಸ್ಥಳದಲ್ಲಿ ಈ ಕುಂಭಮೇಳ ನಡೆಯುತ್ತದೆ.

ಅಮೃತವುಕ್ಕುವ ವೇಳೆ ಪವಿತ್ರ ಸ್ನಾನ

‘ಸಮುದ್ರಮಥನದ ನಂತರ ದೊರಕಿದ ಅಮೃತವನ್ನು ಮೋಹಿನಿ ಅವತಾರದಲ್ಲಿ ವಿಷ್ಣು ಕೊಂಡೊಯ್ಯುತ್ತಾನೆ. ಹಾಗೆ ಅಮೃತವನ್ನು ಸಾಗಿಸುವಾಗ ಆ ಕುಂಭದಿಂದ ನಾಲ್ಕು ಹನಿ ಅಮೃತ ಭೂಮಿಗೆ ಬೀಳುತ್ತದೆ. ಒಂದು ಹನಿ ಅಮೃತವು ಪ್ರಯಾಗರಾಜ್ನಲ್ಲೂ ಬೀಳುತ್ತದೆ’ ಎಂದು ಪುರಾಣ ಹೇಳುತ್ತದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಇಲ್ಲಿ ಅಮೃತ ಉಕ್ಕುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಆರು ವರ್ಷಕ್ಕೊಮ್ಮೆ ಅರ್ಧಕುಂಭಮೇಳ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.