ಗಾಜಿಯಾಬಾದ್: ‘ಅಳಬೇಡ, ಅವನು ಈಗ ಆನಂದಮಯವಾದ ಜಾಗದಲ್ಲಿದ್ದಾನೆ’ ಎಂದು ಪರಸ್ಪರ ಹೇಳಿಕೊಳ್ಳುತ್ತಾ ಹರೀಶ್ ರಾಣಾ ಅವರಿಗೆ ಅವರ ಪೋಷಕರು ಬುಧವಾರ ಅಂತಿಮ ವಿದಾಯ ಹೇಳಿದರು. ಹರೀಶ್ ಅವರ ಶವದ ಮುಂದೆ ಕೈ ಮುಗಿದು ನಿಂತಿದ್ದ ತಾಯಿ, ‘ಯಾರೂ ಅಳಬಾರದು’ ಎನ್ನುತ್ತಾ ಬಂದವರನ್ನು ಸಂತೈಸುತ್ತಿದ್ದ ತಂದೆ...

13 ವರ್ಷಗಳಿಂದ ಹರೀಶ್ ಕೋಮಾದಲ್ಲೇ ಇದ್ದರು. ಮಗನ ದಯಾಮರಣಕ್ಕೆ ಅನುಮತಿ ನೀಡುವಂತೆ ತಂದೆ ಅಶೋಕ್ ರಾಣಾ, ತಾಯಿ ನಿರ್ಮಲಾ ದೇವಿ ಸುಪ್ರೀಂ ಕೋರ್ಟ್ ಅನ್ನು ಕೋರಿಕೊಂಡಿದ್ದರು. ಇತ್ತೀಚೆಗೆ ದಯಮಾರಣಕ್ಕೆ ಅನುಮತಿಯನ್ನೂ ನೀಡಿತ್ತು. ಸುದೀರ್ಘ ಕಾಲದವರೆಗೂ ಸಾವು–ಬದುಕಿನ ಮಧ್ಯೆ ಹೋರಾಟ ನಡೆಸಿದ್ದ 31 ವರ್ಷದ ಹರೀಶ್ ಅವರು ಮಂಗಳವಾರ ಕೊನೆಯುಸಿರೆಳೆದರು.

ಹರೀಶ್ ಅವರ ತಮ್ಮ ಆಶಿಶ್ ರಾಣಾ, ಸಹೋದರಿ ಭಾವನ ಕೂಡ ಅಂತಿಮ ನಮನ ಸಲ್ಲಿಸಿದರು. ಕುಟುಂಬದವರು, ಈ ಭಾವನಾತ್ಮಕ ಪಯಣದಲ್ಲಿ ಹರೀಶ್ ಅವರ ಪೋಷಕರೊಂದಿಗೆ ಇದ್ದ ಸ್ನೇಹಿತರು, ಸಂಕಷ್ಟದಲ್ಲಿ ಕುಟುಂಬದ ಜೊತೆ ಇದ್ದ ಬ್ರಹ್ಮಕುಮಾರಿ ಸಮಾಜದವರು, ನೆರೆ–ಹೊರೆಯವರು, ಹಲವು ಎನ್ಜಿಒಗಳ ಸದಸ್ಯರು, ಏಮ್ಸ್ನ ಸಿಬ್ಬಂದಿ... ಹೀಗೆ ಎಲ್ಲರೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಆಂಬುಲೆನ್ಸ್ ಮೂಲಕ ಹರೀಶ್ ಅವರ ಪಾರ್ಥೀವ ಶರೀರವನ್ನು ಅಂತ್ಯಸಂಸ್ಕಾರ ನಡೆಯುವ ಸ್ಥಳಕ್ಕೆ ಕರೆತರಲಾಗಿತ್ತು. ಅಂತ್ಯಸಂಸ್ಕಾರದ ಜಾಗವನ್ನು ಗುಲಾಬಿ ಹೂವುಗಳ ಪಕಳೆಗಳಿಂದ ಮುಚ್ಚಲಾಗಿತ್ತು. ‘ಹರೀಶ್ ಅವರ ಕಣ್ಣುಗಳನ್ನು ದಾನ ಮಾಡಲಾಯಿತು’ ಎಂದು ಬ್ರಹ್ಮಕುಮಾರಿ ಸಮಾಜದ ಸಹೋದರಿ ಲವ್ಲಿ ಮಾಹಿತಿ ನೀಡಿದರು. ಇತರೆ ಅಂಗಾಗಳನ್ನೂ ದಾನ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.

ಆರ್ಥಿಕವಾಗಿಯೂ ಭಾನಾತ್ಮಕವಾಗಿಯೂ ತೀವ್ರ ಸಂಕಷ್ಟ ಎದುರಿಸಿಯೂ ಹರೀಶ್ ಅವರನ್ನು ಇಷ್ಟು ವರ್ಷಗಳ ವರೆಗೂ ನೋಡಿಕೊಂಡಿದ್ದರ ಬಗ್ಗೆ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಎಲ್ಲರೂ ಹರೀಶ್ ಅವರ ಪೋಷಕರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ದಯಮಾರಣಕ್ಕೆ ಅನುಮತಿ ನೀಡುವಂತೆ ಕೋರಿಕೊಂಡಿದ್ದು, ನಮಗೆ ತೀವ್ರ ನೋವಿನ ನಡೆಯಾಗಿತ್ತು. ಆದರೆ, ಅದು ಅಗತ್ಯವಿತ್ತು’ ಎಂದು ಪೋಷಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.