‘ನನಗೆ ತಿಳಿದಂತೆ, ಪಕ್ಷದಲ್ಲಿ ಇದುವರೆಗೂ ಏನಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಹರಿಯಾಣದ ವಿವಿಧೆಡೆಯಿಂದ ಜನರು ಬಂದು ನನ್ನನ್ನು ಭೇಟಿಯಾಗುತ್ತಿದ್ದಾರೆ. ಪಕ್ಷದಲ್ಲಿ ನೀವು ಹಿರಿಯರಾಗಿದ್ದು, ಯಾಕೆ ಮುಖ್ಯಮಂತ್ರಿಯಾಗಬಾರದು ಎಂದು ಸ್ವಕ್ಷೇತ್ರ ಅಂಬಾಲದಲ್ಲಿಯೂ ಕೇಳುತ್ತಿದ್ದಾರೆ. ಜನರ ಬೇಡಿಕೆ ಹಾಗೂ ಹಿರಿತನ ಆಧರಿಸಿ, ನಾನು ಕೂಡ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸುತ್ತೇನೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದು ತಿಳಿಸಿದರು.