ನವದೆಹಲಿ: ಕಿರ್ಗಿಜ್ ಗಣರಾಜ್ಯದಲ್ಲಿ ಬುಧವಾರದಿಂದ ‘ಶಾಂಘೈ ಸಹಕಾರ ಸಂಘ’ದ ಸದಸ್ಯ ರಾಷ್ಟ್ರಗಳ ಶೃಂಗಸಭೆ ಆರಂಭವಾಗಲಿದ್ದು, ಸದಸ್ಯ ರಾಷ್ಟ್ರಗಳ ಕೈಗಾರಿಕಾ ಸಚಿವರ ಮಟ್ಟದ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.

ಮಂಗಳವಾರ ನವದೆಹಲಿಯಿಂದ ಹೊರಟ ಕುಮಾರಸ್ವಾಮಿ ಅವರು ರಾತ್ರಿ ವೇಳೆಗೆ ಕಿರ್ಗಿಜ್ ರಾಜಧಾನಿ ಬಿಷ್ಕೇಕ್ ನಗರ ತಲುಪಿದ್ದಾರೆ. ಎಸ್.ಎಂ.ಕೃಷ್ಣ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಆನಂತರ ಅಂತಹ ಸಭೆಯಲ್ಲಿ ಭಾಗಿಯಾಗುತ್ತಿರುವ ಮತ್ತೊಬ್ಬ ಕನ್ನಡಿಗ ಸಚಿವ ಕುಮಾರಸ್ವಾಮಿ ಎಂದು ಅವರ ಕಚೇರಿಯು ತಿಳಿಸಿದೆ.

ನಾಲ್ಕು ದಿನ ಈ ಶೃಂಗಸಭೆ ನಡೆಯಲಿದೆ. ಭಾರತದಲ್ಲಿ ಕೈಗಾರಿಕೆ ಮತ್ತು ಉದ್ಯಮಗಳ ಬೆಳವಣಿಗೆಗೆ ಇರುವ ಅವಕಾಶಗಳು, ಸರ್ಕಾರದ ಉತ್ತೇಜನ ಕ್ರಮಗಳ ಬಗ್ಗೆ ಸಭೆಯಲ್ಲಿ ಕುಮಾರಸ್ವಾಮಿ ಅವರು ತಿಳಿಸಲಿದ್ದಾರೆ. ಜತೆಗೆ, ವಿದ್ಯುತ್ಚಾಲಿತ ಸಾರಿಗೆ, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಇತರ ದೇಶಗಳ ಸಚಿವರ ಜತೆಗೆ ಚರ್ಚಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-1031541958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.