ಚೆನ್ನೈ: ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿರುವ ಹಿನ್ನೆಲೆ ಪಕ್ಷದ ಪ್ರಧಾನ ಕಚೇರಿಯ ಬಳಿ ಗುರುವಾರ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

2022ರಲ್ಲಿ ಎದುರಾಳಿ ಬಣಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಗಳು ಮರುಕಳಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಗ ನಡೆದ ಹಿಂಸಾಚಾರದಲ್ಲಿ ಕಚೇರಿ ಆವರಣವನ್ನು ಧ್ವಂಸಗೊಳಿಸಲಾಗಿತ್ತು.

ಪಕ್ಷವು ಪ್ರಸ್ತುತ ತೀವ್ರ ಆಂತರಿಕ ಸಂಘರ್ಷವನ್ನು ಎದುರಿಸುತ್ತಿದೆ. ಒಂದು ಬಣದ ನೇತೃತ್ವವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಹಿಸಿದ್ದರೆ, ಮತ್ತೊಂದು ಬಣದ ನೇತೃತ್ವವನ್ನು ಸಿ. ವಿ. ಷಣ್ಮುಗಂ ಮತ್ತು ಎಸ್. ಪಿ. ವೇಲುಮಣಿ ವಹಿಸಿದ್ದಾರೆ.

ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯ ನಂತರ ಈ ಭಿನ್ನಮತ ಸ್ಪಷ್ಟವಾಗಿ ಗೋಚರಿಸಿದೆ. ವೇಲುಮಣಿ-ಷಣ್ಮುಗಂ ಬಣದೊಂದಿಗೆ ಗುರುತಿಸಿಕೊಂಡಿದ್ದ 25 ಮಂದಿ ಎಐಎಡಿಎಂಕೆ ಬಂಡಾಯ ಶಾಸಕರು ಆಡಳಿತಾರೂಢ ಟಿವಿಕೆ ಪರವಾಗಿ ಮತ ಚಲಾಯಿಸಿದ್ದರು.

ಇದಾದ ಬೆನ್ನಲ್ಲೇ ಪಳನಿಸ್ವಾಮಿ ಅವರು ವೇಲುಮಣಿ, ಷಣ್ಮುಗಂ, ನತ್ತಮ್ ಆರ್. ವಿಶ್ವನಾಥನ್ ಸೇರಿದಂತೆ 25 ಶಾಸಕರನ್ನು ಪಕ್ಷದ ವಿವಿಧ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.

ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಪಕ್ಷದ ಪರ ವಕೀಲ ಐ. ಎಸ್. ಇನ್ಬಾದುರೈ ಅವರು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ಅಧಿಕೃತ ದೂರು ಸಲ್ಲಿಸುವ ಸಾಧ್ಯತೆಯಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.