ಶಿಮ್ಲಾ: ಹಿಮಾಚಲ ಪ್ರದೇಶದ ಚಾಂಬಾ ಜಿಲ್ಲೆಯಲ್ಲಿ ಕಾರೊಂದು ಸುಮಾರು 500 ಮೀಟರ್ ಆಳವಾದ ಕಮರಿಗೆ (ಕಣಿವೆ ಪ್ರದೇಶ) ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಏಳು ಮಂದಿ ಕರ್ನಾಟಕದವರು.

ಶುಕ್ರವಾರ ತಡರಾತ್ರಿ ಬೈರಾಗ್ ಸಚ್ ಪಾಸ್ ಕಿಲ್ಲಾರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಶನಿವಾರ ಮಧ್ಯಾಹ್ನ ಸ್ಥಳೀಯರ ಗಮನಕ್ಕೆ ಬಂದಿತ್ತು.

ಮೃತರನ್ನು ಬೆಂಗಳೂರಿನ ಕಾಡುಗೋಡಿಯ ಅರವಿಂದ್ ಚಂದ್ರಕರ್, ಅವರ ಪತ್ನಿ ಪ್ರಾಚಿ, ಪುತ್ರ 8 ವರ್ಷದ ದರ್ಶ್ ಮತ್ತು 11 ವರ್ಷದ ಅಕ್ಷದ್. ಜತೆಗೆ ಪಿ.ಜಿ.ಕಾರ್ತಿಕೇಯನ್, ಅವರ ಪತ್ನಿ ಮಣಿಮಾಲಾ, ಪುತ್ರ ನಂದನ್ ಮತ್ತು ಟ್ಯಾಕ್ಸಿ ಚಾಲಕ, ಹಿಮಾಚಲ ಪ್ರದೇಶದ ಬನಿಖೇಟ್ ನಿವಾಸಿ ವಿಶ್ವಾಸ್ ಎಂದು ಗುರುತಿಸಲಾಗಿದೆ.

‘ಹಿಮಾಚಲ ಪ್ರದೇಶದ ಅತ್ಯಂತ ಕಡಿದಾದ ಮತ್ತು ದುರ್ಗಮ ಹಿಮಚ್ಛಾದಿತ ಪ್ರದೇಶ ಸಚ್ ಪಾಸ್ಗೆ ಇವರೆಲ್ಲರೂ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪೊಲೀಸರು, ಸ್ಥಳೀಯರು ಹಗ್ಗದ ಸಹಾಯದಿಂದ ಕಾರು ಬಿದ್ದಿರುವ ಸ್ಥಳಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಕುಟುಂಬಗಳು ಸೇರಿ ಟ್ಯಾಕ್ಸಿ ಬುಕ್ ಮಾಡಿಕೊಂಡು ತೆರಳಿದ್ದರು. ಸರಿಯಾದ ಸಮಯಕ್ಕೆ ಟ್ಯಾಕ್ಸಿ ವಾಪಸ್ ಬಾರದೇ ಇದ್ದಾಗ ಅನುಮಾನ ಬಂದು ವಾಹನ ಮಾಲೀಕ ಜಿಪಿಎಸ್ ಆಧಾರದ ಮೇಲೆ ಟ್ರ್ಯಾಕ್ ಮಾಡಿದ್ದರು. ಕಲಾವನ್ ಪ್ರದೇಶದಲ್ಲಿ ಕೊನೆಯದಾಗಿ ಟ್ಯಾಕ್ಸಿ ಸಂಪರ್ಕಕ್ಕೆ ಸಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.