ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೃಕೃತಿಯಿಲ್ಲದೇ ಜೀವನವಿಲ್ಲ‘ ಎಂದ ಮರುಕ್ಷಣವೇ ಪ್ರಕೃತಿ ವಿಕೋಪಕ್ಕೆ ಬಲಿಯಾದಳು..!

Last Updated 26 ಜುಲೈ 2021, 15:29 IST
ಅಕ್ಷರ ಗಾತ್ರ

ಶಿಮ್ಲಾ: ಕಳೆದ ಎರಡು ದಿನದ ಹಿಂದೆ ಹಿಮಾಚಲ ಪ್ರದೇಶದ ಕಿನ್ನೂರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ (34) ಸೇರಿದಂತೆ 9 ಜನ ಮೃತಪಟ್ಟಿದ್ದರು.

ವಿಶೇಷವೆಂದರೆ ದೀಪಾ ಶರ್ಮಾ ಅವರು ತಮ್ಮ ಸಾವಿನ ಕೆಲವೇ ನಿಮಿಷಗಳ ಮುಂಚೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಫೋಸ್ಟ್‌ಗಳನ್ನು ನೋಡಿ ಹಲವರು ಕಂಬನಿ ಮಿಡಿಯುವಂತಾಗಿದೆ.

ದೀಪಾ ಶರ್ಮಾ ಅವರು ಜೈಪುರದಲ್ಲಿ ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡಿದ್ದರು. ಜೂ 22 ರಂದು ಒಬ್ಬಂಟಿಯಾಗಿ ಅವರು ಹಿಮಾಚಲ ಪ್ರದೇಶ ಪ್ರವಾಸ ಕೈಗೊಂಡಿದ್ದರು.

ಜೂನ್ 24 ರಂದು ಕನ್ನೂರ್ ಜಿಲ್ಲೆಯ ಸಂಗಲ್ ಕಣಿವೆಯರಮಣಿಯ ಪ್ರವಾಸದಲ್ಲಿ ಅವರಿದ್ದರು. ಆ ದಿನವೇ ಅವರ ಜನ್ಮ ದಿನವಿತ್ತು. ತಾವು ತೆಗೆದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಅವರು,"Life is nothing without mother nature"' (ಪೃಕೃತಿಯಿಲ್ಲದೇ ಜೀವನವಿಲ್ಲ) ಎಂದು ಬರೆದುಕೊಂಡಿದ್ದರು.

ಅಂದು ಸಂಭವಿಸಿದ ಭೂಕುಸಿತದ ಸ್ಥಳದಲ್ಲಿ ಅವರು ಕ್ಯಾಮೆರಾ ಹಿಡಿದು ಫೋಟೊ ತೆಗೆಯುತ್ತಿದ್ದರು. ಆಗ ದೊಡ್ಡ ಕಲ್ಲು ಬಂಡೆ ಅಪ್ಪಳಿಸಿ ದೀಪಾ ಶರ್ಮಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪೃಕೃತಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ದೀಪಾ ಶರ್ಮಾ ಅವರು ಅದೇ ಪೃಕೃತಿಯ ವಿಕೋಪದಿಂದ ಮರಣ ಹೊಂದಿದ್ದು ದುರಂತವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT