ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರಕೂಟ ಐತಿಹಾಸಿಕ ಗೆಲುವು ದಾಖಲಾಗಿಸುತ್ತಿದ್ದಂತೆಯೇ ‘ಶತಕದೊಂದಿಗೆ ಹ್ಯಾಟ್ರಿಕ್’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ‘ಎಕ್ಸ್’ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಒಟ್ಟು 126 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ 100ಕ್ಕೂ ಅಧಿಕ ಸೀಟು ಗೆಲ್ಲುವ ಮೂಲಕ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಚುನಾವಣೆ ಘೋಷಣೆಯಾಗುವ ತಿಂಗಳ ಮೊದಲು ಪಕ್ಷ ಗೆಲ್ಲುವ ಕುರಿತು ಶರ್ಮಾ ನಿಖರವಾಗಿ ಭವಿಷ್ಯ ನುಡಿದಿದ್ದರು. ಚುನಾವಣೆ ಘೋಷಣೆಯಾದ ಬಳಿಕ ಮತ್ತೆರಡು ವಿಷಯಗಳನ್ನು ಬಹಿರಂಗಪಡಿಸಿದ್ದರು. ವಿರೋಧ ಪಕ್ಷ ಕಾಂಗ್ರೆಸ್ ಮುಸಲ್ಮಾನರು ಬಹುಸಂಖ್ಯಾತರಾಗಿರುವ 20–22 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ, ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಪಕ್ಷವು ಅಸ್ಸಾಂ ರಾಜಕಾರಣದಿಂದಲೇ ನಾಮಾವಶೇಷವಾಗಲಿದೆ ಎಂದು ಹೇಳಿದ್ದರು. ಶರ್ಮಾ ಹೇಳಿದ ಎರಡು ವಿಷಯಗಳು ಬಹುತೇಕ ನಿಜವಾಗಿದೆ. ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿರುವ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿದೆ. ಕಳೆದ 25 ವರ್ಷಗಳಲ್ಲಿಯೇ ಕಾಂಗ್ರೆಸ್ನ ಅತ್ಯಂತ ಹೀನಾಯ ಸೋಲಾಗಿದೆ. ಎಐಯುಡಿಎಫ್ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದು, ಕೇವಲ 2 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

2021ರಲ್ಲಿ ಬಿಜೆಪಿ 60ರಲ್ಲಿ ಗೆಲುವು ಪಡೆದರೆ, ಈ ಸಲ ಗೆಲುವಿನ ನಾಗಾಲೋಟವನ್ನು 82 ಕ್ಷೇತ್ರಗಳಿಗೆ ವಿಸ್ತರಿಸಿದೆ. ಮಿತ್ರ ಪಕ್ಷ ಅಸ್ಸೋಂ ಗಣ ಪರಿಷತ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ತಲಾ 10 ಕ್ಷೇತ್ರಗಳಲ್ಲಿ ಗೆಲುವಿನ ಸಿಹಿ ಉಂಡಿದೆ.

ಗುಜರಾತ್ನಂತೆಯೇ ಅಸ್ಸಾಂನಲ್ಲಿಯೂ ಕೂಡ ಸತತ ಮೂರನೇ ಅವಧಿಗೆ ಬಿಜೆಪಿ ಗೆಲುವು ಪಡೆದಿದ್ದು, ಶರ್ಮಾ ನಾಯಕತ್ವಕ್ಕೆ ಜನರು ಬಹುಮತದ ಮುದ್ರೆಯೊತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ಚುನಾವಣೆ ಎದುರಿಸಿದ್ದ ಹಿಮಂತ ಕೂಡ ರಾಷ್ಟ್ರಮಟ್ಟದಲ್ಲಿ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ.

‘ಎನ್ಡಿಎ ಮಿತ್ರಕೂಟಕ್ಕೆ 100ಕ್ಕೂ ಅಧಿಕ ಸೀಟು ಸಾಧ್ಯ ಎಂದು ನಂಬಿದ್ದೆನು. ಮೋದಿ ಅವರ ಆಶೀರ್ವಾದ, ನಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಅಸ್ಸಾಂ ಜನರು ಮನಃಪೂರ್ವಕವಾಗಿ ಆಶೀರ್ವಾದಿಸಿದ್ದಾರೆ’ ಎಂದು ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಹಿಂದುತ್ವ–ಒಳನುಸುಳುಕೋರರಿಗೆ ಕಡಿವಾಣ: ‘ಬಾಂಗ್ಲಾದೇಶದ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹಿಂದೂಗಳನ್ನು ಒಗ್ಗೂಡಿಸಲು ಯಶಸ್ವಿಯಾದರು’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

2021ರಲ್ಲಿ ಮುಖ್ಯಮಂತ್ರಿಯಾದ ಬಳಿಕ ಶರ್ಮಾ ಸರ್ಕಾರವು ಬಂಗಾಳಿ ಮಾತನಾಡುವ ಮುಸಲ್ಮಾನರನ್ನು ಅರಣ್ಯ ಹಾಗೂ ಸರ್ಕಾರಿ ಭೂಮಿಯಿಂದ ಒಕ್ಕಲ್ಲೆಬ್ಬಿಸಿ, ಅಕ್ರಮ ನುಸುಳುಕೋರರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಿದರು. ಅದರ ಜೊತೆಗೆ ಕಾಂಗ್ರೆಸ್ ಹಲವು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು, ಕಾಂಗ್ರೆಸ್ ಘಟಕದಲ್ಲಿ ನಾಯಕತ್ವದ ನಿರ್ವಾತ ಸೃಷ್ಟಿಸಿದರು. ದಶಕಗಳಿಂದ ಬಾಕಿ ಉಳಿಸಿದ್ದ ಹಲವು ಅಭಿವೃದ್ಧಿ ಯೋಜನೆಗಳನ್ನು ಪೂರ್ಲಗೊಳಿಸುವ ಮೂಲಕ ಗೆಲುವಿನ ಹಾದಿ ಸುಗಮಗೊಳಿಸಿದರು ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.