ಗುವಾಹಟಿ: 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಭೇರಿ ಬಾರಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್ನಲ್ಲಿರುವ ಎಲ್ಲ ‘ವಿಶ್ವಾಸಾರ್ಹ’ ಹಿಂದೂ ನಾಯಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಅವರು ಮಂಗಳವಾರ (ಮೇ.6) ಪ್ರತಿಪಾದಿಸಿದ್ದಾರೆ.

ಅಸ್ಸಾಂನ ನಾಜಿರಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಅವರ ಪುತ್ರ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೇವವ್ರತ ಸೈಕಿಯಾ ಅವರ ಸೋಲಿನ ಕುರಿತು ಶರ್ಮಾ ಹೀಗೆ ಪ್ರತಿಕ್ರಿಯಿಸಿದ್ದಾರೆ. ‘ಈಗ ಅವರು ಚುನಾವಣೆಯಲ್ಲಿ ಸೋತಿರುವುದರಿಂದ ಬಿಜೆಪಿಗೆ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ. ವಾಸ್ತವವಾಗಿ, ಕಾಂಗ್ರೆಸ್ನಲ್ಲಿರುವ ಎಲ್ಲ ಪ್ರಬಲ ಹಿಂದೂ ನಾಯಕರು ಮುಂದಿನ ಐದು ವರ್ಷಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ’ ಎಂದರು.

ಕಳೆದ 25 ವರ್ಷಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಪಕ್ಷ ಮಾಡಿದ ಎರಡು ದೊಡ್ಡ ತಪ್ಪುಗಳೇ ಕಾರಣ ಎಂದು ಶರ್ಮಾ ವಿಶ್ಲೇಷಿಸಿದ್ದಾರೆ.

‘ಕಾಂಗ್ರೆಸ್ ನೀಡಿದ್ದ ಹೊಸ ಬೃಹತ್ ಅಸ್ಸಾಂನ ಭರವಸೆಯನ್ನು ಜನ ಇಷ್ಟಪಡಲಿಲ್ಲ. ಇದರ ಮೂಲಕ ಅಲ್ಲಿನ ಜನರನ್ನು ಬಾಂಗ್ಲಾದೇಶದ 'ಮಿಯಾ'ಗಳೊಂದಿಗೆ ವಿಲೀನಗೊಳಿಸಲು ಕಾಂಗ್ರೆಸ್ ಸಂಚು ರೂಪಿಸಿತ್ತು. ಇದು ಹಿಂದೂಗಳು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ಮಾಡಿತು’ ಎಂದು ಅವರು ಆರೋಪಿಸಿದರು.

‘ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ವಿಷಯವನ್ನು ರಾಜಕೀಯಗೊಳಿಸಿದ್ದನ್ನು ಸಹ ಜನ ಸಹಿಸಲಿಲ್ಲ’ ಎಂದು ಅವರು ಹೇಳಿದರು.

ಸೋಮವಾರ (ಮೇ.4) ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆದ್ದಿದ್ದು, ಅವುಗಳಲ್ಲಿ 18 ಮುಸ್ಲಿಂ ಅಭ್ಯರ್ಥಿಗಳಾಗಿರುವುದು ವಿಶೇಷವಾಗಿದೆ. ಬಿಜೆಪಿ ತನ್ನ ಬಲವನ್ನು 60ರಿಂದ (2021ರಲ್ಲಿ) 82ಕ್ಕೆ ಏರಿಸಿಕೊಂಡರೆ, ಮಿತ್ರಪಕ್ಷಗಳಾದ ಎಜಿಪಿ ಮತ್ತು ಬಿಪಿಎಫ್ ತಲಾ 10 ಸ್ಥಾನಗಳನ್ನು ಗೆದ್ದಿವೆ. ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಕೇವಲ 20ರಿಂದ 22 ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಶರ್ಮಾ ಭವಿಷ್ಯ ನುಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.