ಚೆನ್ನೈ: ‘ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಹಿಂದೆ ಹಿಂದಿ ಭಾಷೆ ಹೇರಿಕೆಯ ಹುನ್ನಾರವಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್ ಶನಿವಾರ ಆರೋಪಿಸಿದ್ದಾರೆ.

ಸಿಬಿಎಸ್ಇಯ ಪಠ್ಯಕ್ರಮದ ಚೌಕಟ್ಟನ್ನು ರಾಷ್ಟ್ರೀಯ ಶಿಕ್ಷಣ ನೀತಿ– 2020ರೊಂದಿಗೆ ಜೋಡಿಸಿರುವುದು ಶೈಕ್ಷಣಿಕ ಸುಧಾರಣೆಗಾಗಿ ಅಲ್ಲ. ಹಿಂದಿ ಹೇರಿಕೆಗೆ ಎಂದು ದೂರಿದ್ದಾರೆ.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಭಾಷೆಗಳನ್ನು ಉತ್ತೇಜಿಸುವ ನೆಪದಲ್ಲಿ ದೇಶದ ಶ್ರೀಮಂತ ಹಾಗೂ ವೈವಿಧ್ಯಮಯ ಭಾಷಾ ಪರಂಪರೆಯನ್ನು ಅಂಚಿನಲ್ಲಿಟ್ಟುಕೊಂಡು, ಹಿಂದಿಗೆ ಸವಲತ್ತು ನೀಡುವ ಕೇಂದ್ರೀಕೃತ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುನ್ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವು ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಲಿದೆ. ಆದರೆ, ಪರಸ್ಪರ ಕಲಿಕೆ ಎಲ್ಲಿದೆ? ಹಿಂದಿ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ತಮಿಳು, ತೆಲುಗು, ಕನ್ನಡ, ಮಲಯಾಳ ಅಥವಾ ಬಂಗಾಳಿ, ಮರಾಠಿ ಭಾಷೆಗಳನ್ನು ಕಲಿಯುವಂತೆ ಕಡ್ಡಾಯಗೊಳಿಸಲಾಗುತ್ತದೆಯೇ? ಇಂತಹ ಸ್ಪಷ್ಟತೆ ಇಲ್ಲದ ಈ ನೀತಿಯು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದೆ. ಇದು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.

‘ನಮ್ಮ ಮಕ್ಕಳು ಭವಿಷ್ಯಕ್ಕೆ ಸಿದ್ಧರಾಗಬೇಕು. ಅವರಿಗೆ ಕೃತಕ ಬುದ್ಧಿಮತ್ತೆ, ಎವಿಜಿಸಿಯಂತಹ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಉದಯೋನ್ಮುಖ ಕ್ಷೇತ್ರಗಳಲ್ಲಿ ಕೌಶಲ ನೀಡಬೇಕಿದೆ. ವೈಜ್ಞಾನಿಕ ಮನೋಭಾವ ಹಾಗೂ ವಿಮರ್ಶಾತ್ಮಕ ಚಿಂತನೆ ಬಲಪಡಿಸುವುದು ನಮ್ಮ ಆದ್ಯತೆ ಆಗಿರಬೇಕು. ಅದರ ಬದಲಾಗಿ ಕಠಿಣ ಭಾಷಾ ಹೊರೆಯು ಅವರ ಪ್ರಗತಿಯನ್ನು ಹಳಿತಪ್ಪಿಸುವ ಬೆದರಿಕೆ ಹಾಕುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.