ಹಿರಿಯೂರು: ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಾಬು ಜಗಜೀವನರಾಂ ಕೇಂದ್ರ ಸರ್ಕಾರದಲ್ಲಿ 30 ವರ್ಷ ಸುದೀರ್ಘ ಅವಧಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಉಪ ತಹಶೀಲ್ದಾರ್ ಸಿ. ಕೃಷ್ಣಕುಮಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನ ರಾಂ ಜಯಂತಿ ಉದ್ಘಾಟಿಸಿ ಮಾತನಾಡಿದರು.

1967 ರಿಂದ 1970ರ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಅವರು ಕೃಷಿಯಲ್ಲಿ ಆಧುನೀಕರಣ, ಸುಧಾರಿತ ತಳಿಗಳ ಬಳಕೆ ಮತ್ತು ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಜಾರಿಗೊಳಿಸಿದರು. ಈ ಮೂಲಕ ಆಹಾರದ ಕೊರತೆಯಿಂದ ದೇಶವನ್ನು ಪಾರುಮಾಡಿ ಹಸಿರುಕ್ರಾಂತಿಯ ಹರಿಕಾರ ಎಂದು ಖ್ಯಾತಿ ಪಡೆದರು. ದೇಶವನ್ನು ಆಹಾರ ಆಮದು ಬದಲಿಗೆ ರಫ್ತು ಮಾಡುವ ದೇಶವನ್ನಾಗಿ ಪರಿವರ್ತಿಸಿದರು ಎಂದು ತಿಳಿಸಿದರು.

ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದ ಸಮಯದಲ್ಲಿ ಶ್ರಮಿಕ ವರ್ಗಕ್ಕೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಿದ ಖ್ಯಾತಿ ಜಗಜೀವನರಾಂ ಅವರದ್ದು. 1971ರಲ್ಲಿ ನಡೆದ ಯುದ್ಧದಲ್ಲಿ ರಕ್ಷಣಾ ಸಚಿವರಾಗಿ ಅವರು ನಿರ್ವಹಿಸಿದ ಕಾರ್ಯವನ್ನು ಇತಿಹಾಸ ಮರೆಯಲು ಸಾಧ್ಯವಿಲ್ಲ. ಶೋಷಿತರ ಧ್ವನಿಯಾಗಿದ್ದ ಬಾಬೂಜಿ ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದರು. ಪ್ರಧಾನಿ ಆಗುವ ಎಲ್ಲ ಅರ್ಹತೆಗಳಿದ್ದರೂ ಜಾತಿಯ ಕಾರಣಕ್ಕೆ ಉಪ ಪ್ರಧಾನಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು ಎಂದು ದಲಿತ ಮುಖಂಡ ಆಲೂರು ಕಾಂತಯ್ಯ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೆ. ದಿನೇಶ್, ದಲಿತ ಮುಖಂಡರಾದ ಎಂ.ಡಿ. ಸಣ್ಣಪ್ಪ, ಜಿ.ಎಲ್. ಮೂರ್ತಿ, ಕೆ. ರಾಮಚಂದ್ರ ಮಾತನಾಡಿದರು. ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಚಿತ್ರಾಲ ಮಹೇಶ್ವರರೆಡ್ಡಿ, ನಗರ ಠಾಣೆ ಇನ್ಸ್ಪೆಕ್ಟರ್ ಮಹಮ್ಮದ್ ಸಿರಾಜ್, ಖಜಾನೆ ಇಲಾಖೆ ಅಧಿಕಾರಿ ಸಂಜಯ್, ಅರಣ್ಯ ಇಲಾಖೆ ಅಧಿಕಾರಿ ಬಾಬು, ಮೀನುಗಾರಿಕೆ ಇಲಾಖೆಯ ಮಂಜುನಾಥ್, ರೇಷ್ಮೆ ಇಲಾಖೆಯ ಈಶ್ವರಪ್ಪ, ಬಿಸಿಎಂ ಇಲಾಖೆ ಅಧಿಕಾರಿ ಶಿವಕುಮಾರ್, ಸಿಡಿಪಿಒ ಇಲಾಖೆಯ ಸುಧೀರ್, ದಲಿತ ಮುಖಂಡರಾದ ಆರ್.ರಾಘವೇಂದ್ರ, ಕೆ.ಆರ್.ರಘುನಾಥ್, ಲಕ್ಷ್ಮಣ್, ಸಾದಿಕ್, ಓಂಕಾರಮೂರ್ತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-44-372920878

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.