ಚೆನ್ನೈ: 50ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ಹೊಂದಿದ್ದ ರೌಡಿಶೀಟರ್‌ನನ್ನು ತಮಿಳುನಾಡು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
40ರ ವಯಸ್ಸಿನ‘ ಕಕ್ಕತೋಪ್ಪಿ ಬಾಲಾಜಿ’ ಎನ್‌ಕೌಂಟರ್ ಆದ ರೌಡಿ ಶೀಟರ್. ಈತ ಕೆಲ ಸಮಯದ ಹಿಂದೆ ಬಂಧನದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದನು. ಆತನ ಅಡಗುದಾಣದ ಸುಳಿವು ಆಧರಿಸಿ ಪೊಲೀಸರು ಉತ್ತರ ಚೆನ್ನೈನ ವ್ಯಾಸರ್ಪಾಡಿ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದ್ದಾಗ ಆತ ಪತ್ತೆಯಾಗಿದ್ದಾನೆ.
ಪೊಲೀಸರನ್ನು ಕಂಡ ತಕ್ಷಣ ಅವರೆಡೆಗೆ ಗುಂಡು ಹಾರಿಸಿದ್ದಾನೆ. ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ರೌಡಿ ಶೀಟರ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತನ ವಿರುದ್ದ ಕೊಲೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.