ಇಂಫಾಲ: ಮಣಿಪುರದ ಕಾಂಗ್ಪೊಕ್ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಯ ಮೇಲೆ ಶುಕ್ರವಾರ ಗುಂಪೊಂದು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇಂಫಾಲ ಪೂರ್ವ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಸೈಬೋಲ್ ಗ್ರಾಮದಲ್ಲಿ ನಿಯೋಜಿಸಿರುವ ಭದ್ರತಾ ಪಡೆಗಳನ್ನು ವಾಪಸ್ ಕರೆಸುವಲ್ಲಿ ಎಸ್ಪಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆದಿದೆ.
.Sydney Test: ಮತ್ತೆ ಅದೇ ತಪ್ಪು; ಔಟ್ಸೈಡ್ ಆಫ್ ಎಸೆತ ಕೆಣಕಿ ಔಟಾದ ಕೊಹ್ಲಿ.ಪೋಖ್ರಾನ್ ಪರಮಾಣು ಪರೀಕ್ಷೆ: ಖ್ಯಾತ ಭೌತ ವಿಜ್ಞಾನಿ ಡಾ. ರಾಜಗೋಪಾಲ ಚಿದಂಬರಂ ನಿಧನ.
ಎಸ್ಪಿ ಕಚೇರಿ ಆವರಣದಲ್ಲಿದ್ದ ಪೊಲೀಸರ ವಾಹನಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಇದೇ ವೇಳೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ಗಳಿಂದ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಪ್ರಭಾಕರ್ ಅವರಿಗೆ ಗಾಯಗಳಾಗಿದ್ದು, ಪ್ರತಿಭಟನಾಕಾರರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜಂಟಿ ಭದ್ರತಾ ಪಡೆಗಳು ಮೇಲ್ವಿಚಾರಣೆ ನಡೆಸುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
.Sydney Test: ಗಾಯಗೊಂಡು ಕ್ರೀಡಾಂಗಣ ತೊರೆದ ಬೂಮ್ರಾ; ತಂಡದ ಹೊಣೆ ಕೊಹ್ಲಿ ಹೆಗಲಿಗೆ.Sydney Test: ರಿಷಭ್ ಪಂತ್ ವೇಗದ ಅರ್ಧಶತಕ; ಭಾರತಕ್ಕೆ 145 ರನ್ ಮುನ್ನಡೆ.
ಭದ್ರತಾ ಪಡೆಗಳು ಡಿಸೆಂಬರ್ 31ರಂದು ಸೈಬೋಲ್ ಗ್ರಾಮದಲ್ಲಿ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆಯನ್ನು ಖಂಡಿಸಿ ಕುಕಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ನಡೆದ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅನೇಕ ಮಂದಿ ಗಾಯಗೊಂಡಿದ್ದರು.
.ಒಡಿಶಾ | 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಾಸಿಕ ಪಿಂಚಣಿ ₹3500: ಈ ತಿಂಗಳಿಂದ ಜಾರಿ.ಮೆಡಿಕಲ್ ಸೀಟು ಖಾಲಿ ಉಳಿಯುವಂತಿಲ್ಲ: ಸುಪ್ರೀಂ ಕೋರ್ಟ್.IND vs AUS Test | ಬೌಲರ್ಗಳ ಮೆರೆದಾಟ; ಭಾರತ ಬ್ಯಾಟರ್ಗಳ ಪರದಾಟ.ಸಂಗತ: ‘ಶಾಸನ’ ಮೀರಿಸಿದ ಶ್ವಾನ ಪ್ರೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.