ಹೈದರಾಬಾದ್: ಮದುವೆ ಮುರಿದು ಬಿದ್ದಿದ್ದರಿಂದ ಕೋಪಗೊಂಡ 24 ವರ್ಷದ ಯುವಕನೊಬ್ಬ ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ 22 ವರ್ಷದ ಯುವತಿಗೆ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ.

ಘಟನೆ ಮಾರ್ಚ್ 11ರಂದು ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಯುವಕನಿಗೆ ಎಚ್ಐವಿ ಸೋಂಕು ದೃಢಪಟ್ಟಿದ್ದ ಕಾರಣ, ವಧುವಿನ ಪೋಷಕರು ಮದುವೆಯನ್ನು ರದ್ಧು ಮಾಡಿದ್ದರು. ಈ ದ್ವೇಷದಿಂದ ಆರೋಪಿಯು ಯುವತಿಯ ಮನೆಯಲ್ಲಿ ಆಕೆಗೆ ಬಲವಂತವಾಗಿ ತನ್ನ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ ಎಂದು ಆಕೆಯ ಕುಟುಂಬದವರು ದೂರು ನೀಡಿದ್ದಾರೆ.

‘ಯುವಕನ ಪೋಷಕರು ಈಗಾಗಲೆ ಎಚ್ಐವಿ ಪೀಡಿತರಾಗಿದ್ದರಿಂದ, ಯುವತಿಯ ಪೋಷಕರು ಕಳೆದ ಸೆಪ್ಟೆಂಬರ್ನಲ್ಲಿ ಯುವಕನ ರಕ್ತ ಪರೀಕ್ಷೆ ನಡೆಸಿದ್ದರು. ಯುವತಿಗೂ ಎಚ್ಐವಿ ಸೋಂಕು ತಗುಲಿದರೆ, ಆಕೆ ಶಾಶ್ವತವಾಗಿ ತನ್ನೊಂದಿಗೆ ಇರುತ್ತಾಳೆ ಎಂದು ಭಾವಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.