ಕೋಲ್ಕತ್ತ: ‘ಜಲ್ಮುರಿ ತಿಂದಿದ್ದು ನಾನಾದರೆ, ಅದರ ಮೆಣಸಿಕಾಯಿ ಖಾರ ತಟ್ಟಿದ್ದು ಟಿಎಂಸಿ ನಾಯಕರಿಗೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಇಂದು (ಗುರುವಾರ) ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಕೃಷ್ಣನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಲ್ಮುರಿ ವಿಷಯವನ್ನು ತೆಗೆದುಕೊಂಡು ಟಿಎಂಸಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

‘ಮೇ 4 ರಂದು ಬಂಗಾಳದಲ್ಲಿಯೂ ಬಿಜೆಪಿಯ ವಿಜಯದ ಸಂಭ್ರಮಾಚರಣೆ ನಡೆಯಲಿದೆ. ಆ ವೇಳೆ ಸಿಹಿ ಜೊತೆ ಜಲ್ಮುರಿಯನ್ನೂ ಹಂಚಲಾಗುವುದು. ಜಲ್ಮುರಿ ಕೆಲವು ಜನರಿಗೆ ದೊಡ್ಡ ಆಘಾತ ನೀಡಿದೆ. ನಾನು ಜಲ್ಮುರಿ ತಿಂದೆ, ಆದರೆ ಅದರ ಖಾರ ತಗುಲಿದ್ದು ಮಾತ್ರ ಟಿಎಂಸಿಗೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘15 ವರ್ಷಗಳ ಹಿಂದೆ ಜನರು ಕಮ್ಯುನಿಸ್ಟರ ವಿರುದ್ಧವಾಗಿದ್ದರು. ಇಂದು ಅವರು ಟಿಎಂಸಿಯ ಜಂಗಲ್ ರಾಜ್ ವಿರುದ್ಧ ನಿಂತಿದ್ದಾರೆ. ದಮನಕಾರಿಗಳು ಮತ್ತು ಭ್ರಷ್ಟರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ನಮ್ಮ ಮಂತ್ರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬುದು ನಿಮಗೆ ತಿಳಿದಿದೆ. ಆದರೆ ಟಿಎಂಸಿ 'ಘುಸ್ಪೈಠಿಯೋಂ ಕಾ ಸಾಥ್, ಘುಸ್ಪೈಠಿಯೋಂ ಕಾ ವಿಕಾಸ್' (ನುಸುಳುಕೋರರ ಸಾಥ್, ನುಸುಳುಕೋರರ ವಿಕಾಸ) ಎಂಬುದರಲ್ಲಿ ನಂಬಿಕೆ ಇಟ್ಟಿದೆ. ಅವರು ನುಸುಳುಕೋರರಿಗೆ ಆಶ್ರಯ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕಳೆದ 50 ವರ್ಷಗಳಲ್ಲೇ ಈ ಚುನಾವಣೆಯಲ್ಲಿ ಹಿಂಸಾಚಾರವು ಅತ್ಯಂತ ಕನಿಷ್ಠ ಮಟ್ಟದಲ್ಲಿದೆ ಎಂದು ಹೇಳಿದ ಅವರು, ಶಾಂತಿಯುತ ಮತದಾನವನ್ನು ಖಚಿತಪಡಿಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ್ದಾರೆ.

‘ಇದುವರೆಗಿನ ಮಾಹಿತಿಯ ಪ್ರಕಾರ, ಮತದಾನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಎಲ್ಲಿ ಮತದಾನದ ಪ್ರಮಾಣ ಹೆಚ್ಚಿದೆಯೋ ಅಲ್ಲೆಲ್ಲಾ ಬಿಜೆಪಿ ಬಲವಾದ ಜನಾದೇಶವನ್ನು ಪಡೆದಿದೆ ಎಂಬುದನ್ನು ನಾವು ನೋಡಿದ್ದೇವೆ’ ಎಂದಿದ್ದಾರೆ.

ಬಂಗಾಳದ 152 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ 62.18 ರಷ್ಟು ಮತದಾನ ದಾಖಲಾಗಿದೆ.

ಸಿಎಎ: ಮೋದಿ ಗ್ಯಾರಂಟಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ತಮ್ಮ ನಿಲುವನ್ನು ಪುನರುಚ್ಚರಿಸಿದ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು ಎಂದು ಹೇಳಿದರು.

‘ಮತುವಾ ಸಮುದಾಯ, ನಮಶೂದ್ರ ಸಮುದಾಯ ಮತ್ತು ನಿರಾಶ್ರಿತ ಕುಟುಂಬಗಳು ಟಿಎಂಸಿಗೆ ಹೆದರುವ ಅಗತ್ಯವಿಲ್ಲ ಎಂದು ಗ್ಯಾರಂಟಿ ನೀಡಲು ನಾನು ಬಂದಿದ್ದೇನೆ. ಸರ್ಕಾರ ರಚನೆಯಾದ ನಂತರ, ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಅರ್ಹವಾದ ಪ್ರತಿಯೊಂದು ಹಕ್ಕು ಮತ್ತು ಪ್ರಯೋಜನವನ್ನು ನೀವು ಪಡೆಯುತ್ತೀರಿ. ಇದು ಮೋದಿಯ ಗ್ಯಾರಂಟಿ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.