ನವದೆಹಲಿ: ಅಸ್ಸಾಂನ ಜೋರ್ಹಾಟ್ ವಾಯುನೆಲೆಯಿಂದ ಟೇಕ್ ಆಫ್ ಆದ ಭಾರತೀಯ ವಾಯುಪಡೆಯ (ಐಎಎಫ್) ಸುಖೋಯ್– 30 ಎಂಕೆಐ ಯುದ್ಧ ವಿಮಾನವು ಗುರುವಾರ ನಾಪತ್ತೆಯಾಗಿದೆ.

ಯುದ್ಧ ವಿಮಾನದ ಹುಡುಕಾಟಕ್ಕೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಐಎಎಫ್ ಮಾಹಿತಿ ಹಂಚಿಕೊಂಡಿದೆ.

‘ರಷ್ಯಾ ನಿರ್ಮಿತ ಸುಖೋಯ್ ಯುದ್ಧ ವಿಮಾನವು ಟೇಕಾಫ್ ಆದ ಬಳಿಕ ಸಂಜೆ 7.42ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿದೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳನ್ನು ಖಾತರಿ ಪಡಿಸಿಕೊಳ್ಳಲಾಗುತ್ತಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದೆ.

ಸುಖೋಯ್– 30 ಎಂಕೆಐ, ಎರಡು ಆಸನಗಳಿರುವ ದೀರ್ಘ ಶ್ರೇಣಿಯ ಯುದ್ಧ ವಿಮಾನವಾಗಿದ್ದು, ಸುಖೋಯ್ನ 260 ಯುದ್ಧ ವಿಮಾನಗಳ ಸಮೂಹವನ್ನು ಐಎಎಫ್ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.