ವ್ಯವಸ್ಥೆಯಲ್ಲಿ ಪ್ರಾಮಾಣಿಕರಿಗೆ ವಿಭಿನ್ನ ರೀತಿಯ ಶಿಕ್ಷೆ ನೀಡಲಾಗುತ್ತದೆ. ಅಲ್ಲಿ ಅವರಿಗೆ ಸಂಬಳ ನೀಡಲಾಗುತ್ತದೆ. ಆದರೆ, ದೀರ್ಘಕಾಲದವರೆಗೆ ಯಾವುದೆ ಹುದ್ದೆ ಅಥವಾ ಜವಾಬ್ದಾರಿ ನೀಡಲಾಗುವುದಿಲ್ಲ ಎಂದು ಮಂಗಳವಾರ ತಮ್ಮ ವೃತ್ತಿಗೆ ರಾಜೀನಾಮೆ ಸಲ್ಲಿಸಿದ 2022ರ ಬ್ಯಾಚ್ನ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ಆರೋಪಿಸಿದ್ದಾರೆ.

ಆಳುವ ವರ್ಗವು ತಮಗೆ ಕೆಲಸವಿಲ್ಲದೆ ಸುಮ್ಮನೆ ಕೂರುವಂತೆ ಮಾಡಿತ್ತು. ಸಂಬಳ ಬರುತ್ತಿತ್ತು, ಆದರೆ, ಸಾರ್ವಜನಿಕರ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ಕೆಲಸ ಮಾಡದೆ ಸಂಬಳ ಪಡೆಯುವುದು ಕೂಡ ಒಂದು ರೀತಿಯ ಭ್ರಷ್ಟಾಚಾರವೆ. ಮಾತ್ರವಲ್ಲ, ರಾಜೀನಾಮೆಯು ತಮ್ಮ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

ರಾಹಿ ಅವರನ್ನು 2025ರ ಜುಲೈ 28ರಂದು ಉತ್ತರ ಪ್ರದೇಶದ ಶಹಜಹಾನ್ಪುರದ ಪುವಾಯನ್ನಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿ ನೇಮಕ ಮಾಡಲಾಯಿತು. ಆದರೆ, ಅಧಿಕಾರ ವಹಿಸಿಕೊಂಡ 36 ಗಂಟೆಗಳ ಒಳಗೆ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲಾಯಿತು.

ಶಹಜಹಾನ್ಪುರದಲ್ಲಿ ನಡೆದ ವಕೀಲರ ಪ್ರತಿಭಟನೆಯ ಸಂದರ್ಭದಲ್ಲಿ ರಾಹಿ ಅವರು ಕಿವಿ ಹಿಡಿದು ಬಸ್ಕಿ ಹೊಡೆದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ, ಅವರನ್ನು ಉತ್ತರಪ್ರದೇಶದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲಾಯಿತು.

ಏನಿದು ಕಿವಿಡಿಹಿಡಿದು ಬಸ್ಕಿ ಹೊಡೆದ ಘಟನೆ?

ಶಹಜಹಾನ್ಪುರದ ತಹಶೀಲ್ದಾರ್ ಕಚೇರಿ ಬಳಿಕ ವಕೀಲ ಅಗ್ಯರಾಮ್ ಶರ್ಮಾ ಅವರು ಗುಮಾಸ್ತರೊಬ್ಬರು ಗೋಡೆಗೆ ಮೂತ್ರ ವಿಸರ್ಜಿಸುತ್ತಿರುವುದನ್ನು ನೋಡಿದರು. ಕೂಡಲೆ, ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ರಾಹಿ ಅವರ ಬಳಿ ತಹಶೀಲ್ದಾರ್ ಕಚೇರಿಯ ಅವ್ಯವಸ್ಥೆಯ ಕುರಿತು ವಕೀಲರು ತಿಳಿಸಿದರು. ಅಲ್ಲಿನ ಸಮಸ್ಯೆಗಳನ್ನು ಒಪ್ಪಿಕೊಂಡ ರಾಹಿ ಅವರು ವಕೀಲರ ಮುಂದೆ ಕಿವಿ ಹಿಡಿದುಕೊಂಡು 5 ಬಾರಿ ಬಸ್ಕಿ ಹೊಡೆದು ಕ್ಷಮೆಯಾಚಿಸಿದರು. ಈ ವಿಡಿಯೊ ಹರಿದಾಡಲು ಪ್ರಾರಂಭವಾದ ಬಳಿಕ ಸರ್ಕಾರ ಅವರಿಂದ ಸ್ಪಷ್ಟನೆ ಕೇಳಿತ್ತು. ಬಳಿಕ ಅವರನ್ನು ಲಖನೌದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲಾಯಿತು.

ರಿಂಕು ಸಿಂಗ್ ಕುರಿತು

ಐಎಎಸ್ ಸೇರುವ ಮೊದಲು, ರಾಹಿ ಅವರು 2004ರಲ್ಲಿ ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪಿಸಿಎಸ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು.

2008 ರಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ವಿದ್ಯಾರ್ಥಿ ವೇತನ ಮತ್ತು ಪಿಂಚಣಿ ಯೋಜನೆಗಳಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದರು.

2009ರ ಮಾರ್ಚ್ ತಿಂಗಳಿನಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಒಂದು ಕಣ್ಣು ಕಳೆದುಕೊಳ್ಳುತ್ತಾರೆ.

ರಾಹಿ ಅವರು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯವರು. ಅವರು 2021ರಲ್ಲಿ ವಿಶೇಷ ಚೇತನರ ಕೋಟಾದ ಅಡಿಯಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು 2022ರಲ್ಲಿ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.