ಪೋರಬಂದರ್ ಸಮೀಪ ಸಾಗುತ್ತಿದ್ದ ‘ಹರಿ ಲೀಲಾ’ ಟ್ಯಾಂಕರ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿಯನ್ನು ರಕ್ಷಿಸಲು ಐಸಿಜಿ ಸೋಮವಾರ ರಾತ್ರಿ 11ಕ್ಕೆ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಕಾರ್ಯಾಚರಣೆ ಮಧ್ಯದಲ್ಲಿಯೇ ಹೆಲಿಕಾಪ್ಟರ್ ಪತನಗೊಂಡಿದೆ. ಸದ್ಯ ಒಬ್ಬ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಉಳಿದ ಮೂವರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಐಸಿಜಿ ‘ಎಕ್ಸ್’ನಲ್ಲಿ ತಿಳಿಸಿದೆ.