ನವದೆಹಲಿ: ದೇಶದ ಹೆಚ್ಚಿನ ಭಾಗಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಏಪ್ರಿಲ್ನಿಂದ ಜೂನ್ವರೆಗೆ ಮೂರು ತಿಂಗಳು ದೇಶದ ವಿವಿಧೆಡೆ ಗರಿಷ್ಠ ಉಷ್ಣಾಂಶ, ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ರಾತ್ರಿಯ ತಾಪಮಾನವು ಸಾಮಾನ್ಯ ಸರಾಸರಿಗಿಂತಲೂ ಹೆಚ್ಚಿರುತ್ತದೆ. ದೇಶದ ಪೂರ್ವ ಕರಾವಳಿ, ಪೂರ್ವ, ಮಧ್ಯ ಮತ್ತು ವಾಯುವ್ಯ ಭಾಗಗಳಲ್ಲಿ ವಾಡಿಕೆಯ ಎರಡರಿಂದ ನಾಲ್ಕು ದಿನಗಳ ಬದಲು ಈ ಬಾರಿ ಬೇಸಿಗೆಯಲ್ಲಿ ಹೆಚ್ಚುವರಿಯಾಗಿ ಮೂರರಿಂದ ಐದು ದಿನ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ನೋಟ ಹೇಳಿದೆ.

ದಕ್ಷಿಣ ಒಳನಾಡು, ಕರ್ನಾಟಕದ ಕರಾವಳಿ, ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಭಾಗದಲ್ಲಿ ಬಿಸಿ ಗಾಳಿ ಬೀಸುವ ದಿನಗಳ ಸಂಖ್ಯೆಯಲ್ಲಿ ಏರಿಕೆ ಇರುವುದಿಲ್ಲ.

‘ಜೂನ್ವರೆಗೆ ಎಲ್ ನಿನೊ ತಟಸ್ಥವಾಗಿರುತ್ತದೆ. ನಂತರ ಕಾಣಿಸಿಕೊಳ್ಳುವ ಹವಾಮಾನ ವೈಪರೀತ್ಯಗಳು ವರ್ಷಾಂತ್ಯದವರೆಗೆ ಮುಂದುವರಿಯಬಹುದು’ ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ಹೇಳಿದ್ದಾರೆ.

ಪೆಸಿಫಿಕ್ ಸಾಗರದಲ್ಲಿ ಉಷ್ಣತೆಯಲ್ಲಿ ಕಂಡುಬರುವ ಹೆಚ್ಚಳವು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರಲಿದೆ. ಇದು ಭಾರತದ ಮುಂಗಾರಿನ ಮೇಲೂ ಪರಿಣಾಮ ಬೀರಲಿದೆ. ಉಷ್ಣತೆಯಲ್ಲಿ ಕಂಡುಬರುವ ಹೆಚ್ಚಳವು ಮೇ ತಿಂಗಳ ಅಂತ್ಯದ ವೇಳೆಗೆ ‘ಸೂಪರ್ ಎಲ್ನಿನೊ’ ಆಗಿ ಪರಿವರ್ತನೆಗೊಳ್ಳಲಿದೆಯೇ ಎಂಬುದರ ಮೇಲೂ ವಿಜ್ಞಾನಿಗಳು ನಿಗಾ ವಹಿಸುತ್ತಿದ್ದಾರೆ ಎಂದರು.

ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ವಾಡಿಕೆಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.