ನವದೆಹಲಿ: ಪೂರ್ವ ಲಡಾಕ್ನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಇರುವ ಪರಿಸ್ಥಿತಿಯ ಕುರಿತು ಭಾರತ ಮತ್ತು ಚೀನಾ ಬುಧವಾರ ಮಾತುಕತೆ ನಡೆಸಿವೆ.

ಗಡಿಯಲ್ಲಿ ಶಾಂತಿ ವಾತಾವರಣವನ್ನು ಕಾಪಾಡಿಕೊಳ್ಳುವ ಹಾಗೂ ಒಟ್ಟಾರೆ ಸಂಬಂಧವನ್ನು ಸುಧಾರಿಸುವ ಚರ್ಚೆಗಳು ನಡೆದವು ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.

ಬೀಜಿಂಗ್ನಲ್ಲಿ ಬುಧವಾರ ನಡೆದ ‘ಸಮಾಲೋಚನೆ ಮತ್ತು ಸಮನ್ವಯತೆಗಾಗಿ ಕಾರ್ಯನೀತಿ (ಡಬ್ಲ್ಯುಎಂಸಿಸಿ)’ಯ ಸಭೆಯಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ಚರ್ಚಿಸಿದರು ಎಂದು ಇಲಾಖೆ ತಿಳಿಸಿದೆ.

ಭಾರತದ ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ಸುಜಿತ್ ಘೋಷ್, ಚೀನಾದ ಗಡಿ ಮತ್ತು ಸಾಗರ ವ್ಯವಹಾರಗಳ ಮಹಾ ನಿರ್ದೇಶಕ ಹೋಯು ಯಾಂಕಿ ಮಾತುಕತೆಯ ನೇತೃತ್ವ ವಹಿಸಿದ್ದರು.

‘2020ರಲ್ಲಿ ನಡೆದ ಗಾಲ್ವಾನ್ ಕಣಿವೆಯ ಸಂಘರ್ಷದ ನಂತರ ಎರಡೂ ದೇಶಗಳ ನಡುವೆ ಉಂಟಾಗಿದ್ದ ಸಂದಿಗ್ದ ಸ್ಥಿತಿ ಸುಧಾರಣೆಗೆ ಒಂದು ವರ್ಷದಿಂದ ಸರಣಿ ಪ್ರಯತ್ನಗಳು ನಡೆದಿವೆ. ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಆಗಿರುವ ಪ್ರಗತಿಗೆ ಚೀನಾ ತೃಪ್ತಿ ವ್ಯಕ್ತಪಡಿಸಿದೆ’ ಎಂದು ಇಲಾಖೆ ತಿಳಿಸಿದೆ.

ಚೀನಾದಲ್ಲಿ ನಡೆಯಲಿರುವ ವಿಶೇಷ ಪ್ರತಿನಿಧಿಗಳ ಸಭೆಯ (ಎಸ್ಆರ್) ತಯಾರಿಯನ್ನು ಜಂಟಿಯಾಗಿ ನಡೆಸಲು ಎರಡೂ ರಾಷ್ಟ್ರಗಳು ಒಪ್ಪಿದವು. ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ನಿಯಂತ್ರಿತ ಕಾರ್ಯತಂತ್ರ ವಿನಿಮಯಕ್ಕೂ ನಿರ್ಧರಿಸಲಾಯಿತು’ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.