ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಹೊರ್ಮುಜ್ ಜಲಸಂಧಿಯಲ್ಲಿ ಇಂಧನ ಸರಬರಾಜು ಮತ್ತು ಸಮುದ್ರ ಸ್ಥಿರತೆಯ ಮೇಲೆ ಅದರ ಪರಿಣಾಮದ ಬಗ್ಗೆ ಭಾರತ ಗುರುವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಅಭೂತಪೂರ್ವ" ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆ ಹಾಗೂ ಏಕಪಕ್ಷೀಯ ಬಲವಂತದ ನಿರ್ಬಂಧಗಳನ್ನು ನಿರ್ವಹಿಸಲು ಪ್ರಾಯೋಗಿಕ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಬ್ರಿಕ್ಸ್ ರಾಷ್ಟ್ರಗಳನ್ನು ಒತ್ತಾಯಿಸಿದೆ.

ನವದೆಹಲಿಯಲ್ಲಿ ಎರಡು ದಿನಗಳ ಬ್ರಿಕ್ಸ್ ಶೃಂಗದ ಉದ್ಘಾಟನಾ ದಿನದಂದು ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮಾತುಕತೆ ಮತ್ತು ರಾಜತಾಂತ್ರಿಕತೆಯು ಸಂಘರ್ಷದಿಂದ ಪರಿಹಾರಕ್ಕೆ ಏಕೈಕ ಸುಸ್ಥಿರ ಮಾರ್ಗವನ್ನು ನೀಡುತ್ತದೆ ಎಂದರು.

ಯುದ್ಧ ಶಮನದ ಪ್ರಯತ್ನಗಳಿಗೆ ರಚನಾತ್ಮಕ ಬೆಂಬಲ ನೀಡಲು ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಗುರಿ ಹೊಂದಿರುವ ಉಪಕ್ರಮಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಜೈಶಂಕರ್ ಹೇಳಿದರು. ಆದರೆ, ಶಾಂತಿ ಸ್ಥಾಪನೆಯನ್ನು ತುಂಡು ತುಂಡಾಗಿ ಮಾಡಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವುದು, ನಾಗರಿಕರನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದನ್ನು ತಪ್ಪಿಸುವುದು ಅತ್ಯಗತ್ಯ ಎಂದು ಗಮನ ಸೆಳೆದರು.

ಸಮಾವೇಶದಲ್ಲಿ ನಡೆದ ಎರಡು ಅಧಿವೇಶನಗಳ ಪೈಕಿ ಒಂದರಲ್ಲಿ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಯುಎಇ ವಿದೇಶಾಂಗ ಸಚಿವ ಖಲೀಫಾ ಶಾಹೀನ್ ಅಲ್ ಮರಾರ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.

ಯುಎಇಯಲ್ಲಿ ಇಂಧನ ಮೂಲಸೌಕರ್ಯದ ಮೇಲೆ ಇರಾನ್ ದಾಳಿ ನಡೆಸಿದೆ ಎಂಬ ಆರೋಪಗಳ ಹಿನ್ನೆಲೆ ಇರಾನ್ ಮತ್ತು ಯುಎಇ ನಡುವೆ ಸಂಬಂಧ ಹಳಸಿದೆ.

ಮೂಲತಃ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿದ್ದ ಬ್ರಿಕ್ಸ್ ಒಕ್ಕೂಟಕ್ಕೆ 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇಗಳನ್ನು ಸೇರಿಸಲಾಯಿತು. 2025ರಲ್ಲಿ ಇಂಡೋನೇಷ್ಯಾವನ್ನು ಸೇರಿಸಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.