ಭಾರತ ಮತ್ತು ಇಟಲಿ ದೇಶಗಳ ನಡುವಿನ ಸಂಬಂಧವು ಈಗ ಒಂದು ಪ್ರಮುಖ ಹಂತವನ್ನು ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ನಡುವಿನ ಬಾಂಧವ್ಯವು ಅಭೂತಪೂರ್ವ ವೇಗದಲ್ಲಿ ಬೆಳೆದಿದೆ. ಕೇವಲ ಸಾಮಾನ್ಯ ಸ್ನೇಹವಾಗಿದ್ದ ನಮ್ಮ ಒಡನಾಟ, ಈಗ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಭವಿಷ್ಯದ ಸಮಾನ ದೃಷ್ಟಿಕೋನವನ್ನು ಆಧರಿಸಿದ ಒಂದು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಿ ಬದಲಾಗಿದೆ.

ಜಾಗತಿಕ ವ್ಯವಸ್ಥೆಯು ದೊಡ್ಡ ಬದಲಾವಣೆಗೆ ಒಳಗಾಗುತ್ತಿರುವ ಈ ಸಮಯದಲ್ಲಿ, ಭಾರತ ಮತ್ತು ಇಟಲಿ ನಡುವಿನ ಪಾಲುದಾರಿಕೆಯು ಉನ್ನತ ರಾಜಕೀಯ ಹಾಗೂ ಸಾಂಸ್ಥಿಕ ಮಟ್ಟದ ನಿಯಮಿತ ಭೇಟಿ ಮತ್ತು ಮಾತುಕತೆಗಳಿಂದ ಮುನ್ನಡೆಯುತ್ತಿದೆ. ಇದು ನಮ್ಮ ಆರ್ಥಿಕ ಚೈತನ್ಯ, ಸಾಮಾಜಿಕ ಸೃಜನಶೀಲತೆ ಮತ್ತು ಸಾವಿರಾರು ವರ್ಷಗಳ ಹಳೆಯ ನಾಗರಿಕತೆಯ ಜ್ಞಾನವನ್ನು ಒಟ್ಟುಗೂಡಿಸುವ ಒಂದು ಹೊಸ ಹಾಗೂ ಉನ್ನತ ಆಯಾಮವನ್ನು ಪಡೆದುಕೊಳ್ಳುತ್ತಿದೆ.

21ನೇ ಶತಮಾನದ ಪ್ರಗತಿ ಮತ್ತು ಭದ್ರತೆಯು ಹೊಸ ಆವಿಷ್ಕಾರಗಳನ್ನು ಮಾಡುವ, ಇಂಧನ ಪರಿವರ್ತನೆಯನ್ನು ಸರಿಯಾಗಿ ನಿರ್ವಹಿಸುವ ಮತ್ತು ತನ್ನ ದೇಶದ ಸಾರ್ವಭೌಮತ್ವವನ್ನು ಬಲಪಡಿಸುವ ರಾಷ್ಟ್ರಗಳ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ ಎಂಬ ಸಾಮೂಹಿಕ ಅರಿವು ನಮ್ಮ ಸಹಕಾರದಲ್ಲಿದೆ. ಈ ಉದ್ದೇಶಕ್ಕಾಗಿ, ಹೊಸ ಗುರಿಗಳನ್ನು ತಲುಪಲು ಮತ್ತು ನಮ್ಮ ಪರಸ್ಪರ ಪೂರಕ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಸಲುವಾಗಿ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಲು ಹಾಗೂ ವೈವಿಧ್ಯಮಯಗೊಳಿಸಲು ನಾವು ಬದ್ಧರಾಗಿದ್ದೇವೆ.

ಕೈಗಾರಿಕಾ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿ ಇಟಲಿ ಹೊಂದಿರುವ ಸ್ಥಾನವನ್ನು ಬಿಂಬಿಸುವ ಇಟಾಲಿಯನ್ ವಿನ್ಯಾಸ, ಅತ್ಯುತ್ತಮ ಉತ್ಪಾದನಾ ಸಾಮರ್ಥ್ಯ ಹಾಗೂ ವಿಶ್ವದರ್ಜೆಯ ಸೂಪರ್ ಕಂಪ್ಯೂಟರ್ ಗಳನ್ನು; ಭಾರತದ ತ್ವರಿತ ಆರ್ಥಿಕ ಪ್ರಗತಿ, ಎಂಜಿನಿಯರಿಂಗ್ ಪ್ರತಿಭೆ, ಬೃಹತ್ ಮಾರುಕಟ್ಟೆ ಹಾಗೂ 100ಕ್ಕೂ ಹೆಚ್ಚು ಯುನಿಕಾರ್ನ್ ಗಳು ಮತ್ತು 2,00,000 ನವೋದ್ಯಮಗಳನ್ನು ಒಳಗೊಂಡ ನಾವೀನ್ಯತೆಯ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸಿ ಒಂದು ಪ್ರಬಲ ಸಮನ್ವಯತೆಯನ್ನು ರೂಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಕೇವಲ ಎರಡು ವ್ಯವಸ್ಥೆಗಳ ಸಾಮಾನ್ಯ ಜೋಡಣೆಯಲ್ಲ, ಬದಲಿಗೆ ನಮ್ಮ ಕೈಗಾರಿಕಾ ಸಾಮರ್ಥ್ಯಗಳು ಪರಸ್ಪರ ಶಕ್ತಿಯನ್ನು ಹೆಚ್ಚಿಸುವಂತಹ ಒಂದು ಮೌಲ್ಯಾಧಾರಿತ ಸಹ-ಸೃಷ್ಟಿಯಾಗಿದೆ.

ಯುರೋಪಿಯನ್ ಒಕ್ಕೂಟ ಮತ್ತು ಭಾರತದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಉಭಯ ದೇಶಗಳಲ್ಲಿ ವ್ಯಾಪಾರ ಹಾಗೂ ಹೂಡಿಕೆಯನ್ನು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ. ರಕ್ಷಣೆ ಮತ್ತು ಏರೋಸ್ಪೇಸ್, ಹಸಿರು ತಂತ್ರಜ್ಞಾನ, ಯಂತ್ರೋಪಕರಣ, ವಾಹನ ಬಿಡಿಭಾಗ, ರಾಸಾಯನಿಕ, ಔಷಧೀಯ ಉತ್ಪನ್ನ, ಜವಳಿ, ಕೃಷಿ-ಆಹಾರ ಮತ್ತು ಪ್ರವಾಸೋದ್ಯಮ ಸೇರಿದಂತೆ ಪ್ರಮುಖ ವಲಯಗಳ ಮೇಲೆ ವಿಶೇಷ ಗಮನ ಹರಿಸುವ ಮೂಲಕ, 2029ರ ವೇಳೆಗೆ ಭಾರತ ಮತ್ತು ಇಟಲಿ ನಡುವಿನ ವ್ಯಾಪಾರದಲ್ಲಿ 20 ಬಿಲಿಯನ್ ಯುರೋ ಗುರಿಯನ್ನು ತಲುಪಲು ಹಾಗೂ ಅದನ್ನು ಮೀರಿ ಸಾಧಿಸಲು ನಾವು ಬಯಸುತ್ತೇವೆ.

ಜಗತ್ತಿನಾದ್ಯಂತ ‘ಮೇಡ್ ಇನ್ ಇಟಲಿ’ ಎಂಬುದು ಯಾವಾಗಲೂ ಅತ್ಯುತ್ತಮ ಗುಣಮಟ್ಟಕ್ಕೆ ಹೆಸರಾಗಿದೆ. ಇಂದು ಅದು ಭಾರತದ ‘ಮೇಕ್ ಇನ್ ಇಟಲಿ’ ಯೋಜನೆಯ ಉನ್ನತ ಗುಣಮಟ್ಟದ ಗುರಿಗಳೊಂದಿಗೆ ಸ್ವಾಭಾವಿಕವಾಗಿ ಹೊಂದಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಮಾರುಕಟ್ಟೆಗಾಗಿ ಉತ್ಪಾದನೆ ಮಾಡಲು ಇಟಾಲಿಯನ್ ಉದ್ಯಮಗಳು ತೋರಿಸುತ್ತಿರುವ ಆಸಕ್ತಿ ಮತ್ತು ಇಟಲಿಯಲ್ಲಿ ಭಾರತೀಯ ಕೈಗಾರಿಕೆಗಳ ಪ್ರಸ್ತುತತೆ ಹೆಚ್ಚುತ್ತಿದ್ದು, ಇದು ಅತ್ಯಂತ ಸಕಾರಾತ್ಮಕ ಸಂಕೇತವಾಗಿದೆ. ಪ್ರಸ್ತುತ ಎರಡೂ ಕಡೆಯಿಂದ ಇಂತಹ ಉದ್ಯಮಗಳ ಒಟ್ಟು ಸಂಖ್ಯೆ 1,000 ದಾಟಿದ್ದು, ಇದು ನಮ್ಮ ಪೂರೈಕೆ ಸರಪಳಿಗಳ ಜೋಡಣೆಯನ್ನು ಮತ್ತಷ್ಟು ಬಲಪಡಿಸಲಿದೆ.

ತಾಂತ್ರಿಕ ನಾವೀನ್ಯತೆಯು ನಮ್ಮ ಪಾಲುದಾರಿಕೆಯ ಪ್ರಮುಖ ಅಂತಃಸತ್ವವಾಗಿದೆ. ಮುಂಬರುವ ದಶಕಗಳು ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಸುಧಾರಿತ ಉತ್ಪಾದನೆ, ನಿರ್ಣಾಯಕ ಖನಿಜಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳಂತಹ ವಲಯಗಳಲ್ಲಿನ ಅಭೂತಪೂರ್ವ ಪ್ರಗತಿಯಿಂದ ಗುರುತಿಸಲ್ಪಟ್ಟ, ಅಳೆಯಲಾಗದ ವ್ಯಾಪ್ತಿಯ ತಾಂತ್ರಿಕ ಕ್ರಾಂತಿಗೆ ಸಾಕ್ಷಿಯಾಗಲಿವೆ. ಭಾರತದ ಕ್ರಿಯಾತ್ಮಕ ನಾವೀನ್ಯ ಪರಿಸರ ವ್ಯವಸ್ಥೆ ಮತ್ತು ಉನ್ನತ ನೈಪುಣ್ಯತೆಯ ವೃತ್ತಿಪರ ಪ್ರತಿಭಾವಂತರ ಸಮೂಹವು, ಇಟಲಿಯ ಸುಧಾರಿತ ಕೈಗಾರಿಕಾ ಸಾಮರ್ಥ್ಯಗಳೊಂದಿಗೆ ಸಮ್ಮಿಲನಗೊಂಡು ಮೇಲ್ಕಂಡ ವಲಯಗಳಲ್ಲಿನ ನಮ್ಮ ಸಹಕಾರವನ್ನು ಸ್ವಾಭಾವಿಕ ಹಾಗೂ ಕಾರ್ಯತಂತ್ರ ಬದ್ಧವಾಗಿಸಿದೆ. ಉಭಯ ರಾಷ್ಟ್ರಗಳ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳ ನಡುವೆ ವರ್ಧಿಸುತ್ತಿರುವ ಪಾಲುದಾರಿಕೆಯು ಈ ಪ್ರಯತ್ನಕ್ಕೆ ಪೂರಕ ಬಲವನ್ನು ನೀಡಲಿದೆ.

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಈಗಾಗಲೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ, ವಿಶೇಷವಾಗಿ 'ಗ್ಲೋಬಲ್ ಸೌತ್' (ಅಭಿವೃದ್ಧಿಶೀಲ ದೇಶಗಳು) ನಲ್ಲಿ ವ್ಯಾಪಕವಾಗಿ ಪ್ರತಿಧ್ವನಿಸುತ್ತಿದೆ. ಕೃತಕ ಬುದ್ಧಿಮತ್ತೆಯು ಪ್ರಮುಖವಾಗಿ ನಮ್ಮ ಸಮಾಜ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಆಳವಾದ ಪರಿಣಾಮ ಬೀರುತ್ತಿದೆ. ಎಐ ತಂತ್ರಜ್ಞಾನದ ಅಭಿವೃದ್ಧಿಯು ಜವಾಬ್ದಾರಿಯುತ ಹಾಗೂ ‘ಮಾನವ’-ಕೇಂದ್ರಿತವಾಗಿರಬೇಕು (ಮನುಷ್ಯನ ಒಳಿತಿಗಾಗಿ ಇರಬೇಕು) ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಇಟಲಿ ದೀರ್ಘಕಾಲದಿಂದ ಜಂಟಿಯಾಗಿ ಶ್ರಮಿಸುತ್ತಿವೆ. ಈ ದೃಷ್ಟಿಕೋನದಿಂದ, ಎಐ ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿಯ ಪ್ರಬಲ ಸಾಧನವಾಗಿ ಉಭಯ ರಾಷ್ಟ್ರಗಳು ಎದುರು ನೋಡುತ್ತವೆ. ಪ್ರಮುಖವಾಗಿ ಗ್ಲೋಬಲ್ ಸೌತ್ ವಲಯದಲ್ಲಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸುಲಭವಾಗಿ ಲಭ್ಯವಾಗುವ ಬಹುಭಾಷಾ ತಂತ್ರಜ್ಞಾನಗಳು ಜನರ ನಡುವಿನ ಸಾಮಾಜಿಕ ಕಂದಕಗಳನ್ನು ಆಳಗೊಳಿಸುವ ಬದಲು ಅವುಗಳನ್ನು ಕಡಿಮೆ ಮಾಡಬಲ್ಲವು.

ತಂತ್ರಜ್ಞಾನದ ಕೇಂದ್ರಬಿಂದುವಾಗಿ ಮಾನವನನ್ನು ಇರಿಸಬೇಕು ಎಂಬ ಭಾರತದ 'ಮಾನವ್' (MANAV) ದೃಷ್ಟಿಕೋನ ಮತ್ತು ತನ್ನ ಮಾನವತಾವಾದಿ ಸಂಪ್ರದಾಯದಲ್ಲಿ ಬೇರೂರಿರುವ ಮಾನವ-ಕೇಂದ್ರಿತ ನೈತಿಕ ತಂತ್ರಜ್ಞಾನದ ನಿಯಮಾವಳಿಗಳನ್ನು ('ಅಲ್ಗಾರ್-ಎಥಿಕ್ಸ್') ಉತ್ತೇಜಿಸುವ ಇಟಲಿಯ ನಾಯಕತ್ವವನ್ನು ಆಧರಿಸಿ, ನಮ್ಮ ಪಾಲುದಾರಿಕೆಯು ಎಐ ತಂತ್ರಜ್ಞಾನವನ್ನು ಸಾಮಾಜಿಕ ಸಬಲೀಕರಣದ ವೇಗವರ್ಧಕವನ್ನಾಗಿ ರೂಪಿಸಲು ಬದ್ಧವಾಗಿದೆ. ನಮ್ಮ ಈ ಕಾರ್ಯವಿಧಾನವು ಭಾರತದ ಡಿಜಿಟಲ್ ವ್ಯಾಪ್ತಿಯನ್ನು ಇಟಲಿಯ ನೈತಿಕ ಹಾಗೂ ಕೈಗಾರಿಕಾ ಪರಿಣತಿಯೊಂದಿಗೆ ಸಂಯೋಜಿಸುವ ಮೂಲಕ, ತಂತ್ರಜ್ಞಾನವು ಮಾನವ ಘನತೆಗೆ ಪೂರಕವಾಗಿ ಸೇವೆ ಸಲ್ಲಿಸುವುದನ್ನು ಖಚಿತಪಡಿಸುತ್ತದೆ.

ಸುರಕ್ಷಿತ ಡಿಜಿಟಲ್ ಸಹಕಾರ, ಸಾಮರ್ಥ್ಯ ವೃದ್ಧಿ ಹಾಗೂ ಬಲಿಷ್ಠ ಸೈಬರ್ ಮೂಲಸೌಕರ್ಯ ವಲಯಗಳಲ್ಲಿ ಅತ್ಯುತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳುವ ಮೂಲಕ, ಪ್ರತಿಯೊಂದು ರಾಷ್ಟ್ರವೂ ಎಐ ಅನ್ನು ರೂಪಿಸುವ ಮತ್ತು ಅದರ ಲಾಭವನ್ನು ಪಡೆಯುವಂತಹ ಮುಕ್ತ, ವಿಶ್ವಾಸಾರ್ಹ ಹಾಗೂ ಸಮಾನ ಡಿಜಿಟಲ್ ಜಗತ್ತನ್ನು ಸೃಷ್ಟಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಈ ದೃಷ್ಟಿಕೋನವೇ ಇಟಲಿಯ ಜಿ-7 ಅಧ್ಯಕ್ಷತೆಯ ತಿರುಳಾಗಿದೆ ಮತ್ತು ನವದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದ 'ಎಐ ಇಂಪ್ಯಾಕ್ಟ್ ಶೃಂಗಸಭೆ 2026' ರ ಪ್ರಮುಖ ಫಲಿತಾಂಶವೂ ಆಗಿದೆ. ಎಐ ಅನ್ನು ಮಾನವಕುಲಕ್ಕಾಗಿ ಮಾನವನೇ ರೂಪಿಸಿದ ಸಾಧನ ಎಂದು ಕಲ್ಪಿಸಿಕೊಳ್ಳುವುದು ಎಂದರೆ ತಂತ್ರಜ್ಞಾನವು ಎಂದಿಗೂ ವ್ಯಕ್ತಿಗಳ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ, ಜನರ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಮತ್ತು ಸಾರ್ವಜನಿಕ ಚರ್ಚೆಗಳನ್ನು ಹಾದಿ ತಪ್ಪಿಸಲು ಅಥವಾ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಬದಲಾಯಿಸಲು ಇದನ್ನು ಬಳಸಲಾಗದು ಎಂದು ದೃಢವಾಗಿ ಪ್ರತಿಪಾದಿಸುವುದಾಗಿದೆ. ಹೆಚ್ಚು ಅಂತರ್ ಸಂಪರ್ಕಿತವಾಗುತ್ತಿರುವ ಇಂದಿನ ಜಗತ್ತಿನಲ್ಲಿ ಸ್ವಾತಂತ್ರ್ಯ ಮತ್ತು ಮಾನವ ಘನತೆಯನ್ನು ರಕ್ಷಿಸುವ ನಮ್ಮ ಬದ್ಧತೆಯು ಈ ಮೂಲಭೂತ ಸವಾಲಿನ ಮೇಲೆಯೇ ಆಧಾರಿತವಾಗಿದೆ.

ನಮ್ಮ ಸಹಕಾರವು ಬಾಹ್ಯಾಕಾಶ ಕ್ಷೇತ್ರಕ್ಕೂ ವಿಸ್ತರಿಸಿದೆ. ಬಾಹ್ಯಾಕಾಶ ಪರಿಶೋಧನೆ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿ, ಇಟಲಿಯ ಏರೋಸ್ಪೇಸ್ ಎಂಜಿನಿಯರಿಂಗ್ ಉತ್ಕೃಷ್ಟತೆಯ ಜೊತೆಗೆ ಸೇರಿ ಜಂಟಿ ಯೋಜನೆಗಳು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನ ಅಭಿವೃದ್ಧಿಗೆ ದೊಡ್ಡ ಅವಕಾಶಗಳನ್ನು ಒದಗಿಸುತ್ತವೆ.

ರಾಷ್ಟ್ರಗಳ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಭದ್ರತೆ ಮತ್ತು ಸ್ಥಿರತೆ ಅತ್ಯಗತ್ಯ. ರಕ್ಷಣೆ, ಭದ್ರತೆ ಮತ್ತು ಕಾರ್ಯತಂತ್ರದ ತಂತ್ರಜ್ಞಾನಗಳಂತಹ ವಲಯಗಳಲ್ಲಿ ತಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಇಟಲಿ ಮತ್ತು ಭಾರತ ಉದ್ದೇಶಿಸಿವೆ. ನಮ್ಮ ಸಹಯೋಗವು ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಭಯೋತ್ಪಾದನೆ, ಅಂತಾರಾಷ್ಟ್ರೀಯ ಅಪರಾಧ ಜಾಲಗಳು, ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳಸಾಗಣೆಯಂತಹ ಬೆದರಿಕೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಬಲಪಡಿಸುತ್ತದೆ.

ಇಂಧನ ವಲಯವು ನಮ್ಮ ಪಾಲುದಾರಿಕೆಯ ಮತ್ತೊಂದು ಪ್ರಮುಖ ಆಧಾರಸ್ತಂಭವಾಗಿದೆ. ವೈವಿಧ್ಯಮಯ ಇಂಧನ ಮೂಲಗಳತ್ತ ಜಾಗತಿಕ ಸ್ಥಿತ್ಯಂತರವು ನಾವೀನ್ಯತೆ, ಹೂಡಿಕೆ ಮತ್ತು ವ್ಯಾಪಕ ಸಹಕಾರವನ್ನು ಅಪೇಕ್ಷಿಸುತ್ತದೆ. ಭಾರತ ಮತ್ತು ಇಟಲಿ ರಾಷ್ಟ್ರಗಳು ನವೀಕರಿಸಬಹುದಾದ ಇಂಧನದಿಂದ ಹಿಡಿದು ಹೈಡ್ರೋಜನ್ ತಂತ್ರಜ್ಞಾನಗಳವರೆಗೆ ಹಾಗೂ ಸ್ಮಾರ್ಟ್ ಗ್ರಿಡ್ ಗಳಿಂದ ಹಿಡಿದು ಸ್ಥಿತಿಸ್ಥಾಪಕ ಮೂಲಸೌಕರ್ಯಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸುತ್ತಿವೆ.

ಗ್ರೀನ್ ಹೈಡ್ರೋಜನ್ ರಫ್ತಿನ ಜಾಗತಿಕ ಕೇಂದ್ರವಾಗಲು ಭಾರತವು ನೀಡುತ್ತಿರುವ ಉತ್ತೇಜನವು ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಇದು ನವೀಕರಿಸಬಹುದಾದ ಮೂಲಸೌಕರ್ಯ ವಲಯದಲ್ಲಿ ಇಟಲಿ ಹೊಂದಿರುವ ಸುಧಾರಿತ ತಂತ್ರಜ್ಞಾನಕ್ಕೆ ಮತ್ತು ಯುರೋಪಿಗೆ ಇಂಧನ ಪ್ರವೇಶ ದ್ವಾರವಾಗಿ ಆ ದೇಶ ಹೊಂದಿರುವ ಕಾರ್ಯತಂತ್ರದ ಪಾತ್ರಕ್ಕೆ ಸಂಪೂರ್ಣವಾಗಿ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ನೇತೃತ್ವದ ಪ್ರಮುಖ ಅಂತಾರಾಷ್ಟ್ರೀಯ ಉಪಕ್ರಮಗಳಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್ಎ), ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ (ಸಿಡಿಆರ್ಐ) ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ)ಗಳಲ್ಲಿ ಇತರ ರಾಷ್ಟ್ರಗಳ ಜೊತೆಗೂಡಿ ನಾವು ನಡೆಸುತ್ತಿರುವ ಸಹಯೋಗವು ಅತ್ಯಂತ ಮಹತ್ವದ್ದಾಗಿದೆ.

ಭೌತಿಕ, ಡಿಜಿಟಲ್ ಹಾಗೂ ಮಾನವ ಸಂಪರ್ಕದ ಬೆಸುಗೆಯೇ ನಮ್ಮನ್ನು ಒಟ್ಟುಗೂಡಿಸುವ ಸೂತ್ರವಾಗಿದೆ. ಭಾರತ ಮತ್ತು ಇಟಲಿ ಉಭಯ ರಾಷ್ಟ್ರಗಳೂ ಜಾಗತಿಕ ಆರ್ಥಿಕತೆಯ ಎರಡು ನಿರ್ಣಾಯಕ ಕೇಂದ್ರಗಳಾದ ಇಂಡೋ-ಪೆಸಿಫಿಕ್ ಮತ್ತು ಮೆಡಿಟರೇನಿಯನ್ ಪ್ರದೇಶಗಳ ಹೃದಯಭಾಗದಲ್ಲಿ ನೆಲೆಗೊಂಡಿವೆ. ಇವುಗಳನ್ನು ಪರಸ್ಪರ ಪ್ರತ್ಯೇಕ ವಲಯಗಳಾಗಿ ನೋಡಲು ಸಾಧ್ಯವಿಲ್ಲ, ಬದಲಿಗೆ ಇವು ದಿನೇದಿನೇ ಹೆಚ್ಚುತ್ತಿರುವ ಅಂತರ್ ಸಂಪರ್ಕಿತ ಪ್ರದೇಶಗಳಾಗಿವೆ. ವಾಸ್ತವವಾಗಿ, ಹಿಂದೂ ಮಹಾಸಾಗರವನ್ನು ಯುರೋಪ್ ಖಂಡಕ್ಕೆ ಜೋಡಿಸುವುದರ ಮೂಲಕ ವ್ಯಾಪಾರ, ತಂತ್ರಜ್ಞಾನ, ಇಂಧನ, ದತ್ತಾಂಶ ಮತ್ತು ವೈಚಾರಿಕ ವಿನಿಮಯದ ಪ್ರಮುಖ ಕಾರಿಡಾರ್ ಆಗಿ ಹೊರಹೊಮ್ಮುತ್ತಿರುವ 'ಇಂಡೋ-ಮೆಡಿಟರೇನಿಯನ್' ಎಂಬ ಹೊಸ ಪರಿಕಲ್ಪನೆಯ ಉಗಮಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ನಿಖರವಾಗಿ ಈ ಅಂತರ್ ಸಂಪರ್ಕಿತ ಆಯಾಮದೊಳಗೆ ನಮ್ಮ ದ್ವಿಪಕ್ಷೀಯ ಬಾಂಧವ್ಯವು ಸ್ವಾಭಾವಿಕವಾಗಿ ಒಂದು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಿ ವಿಕಸನಗೊಳ್ಳುತ್ತಿದೆ; ಇದು ಎರಡು ಖಂಡಗಳನ್ನು ಬೆಸೆಯುವುದರ ಜೊತೆಗೆ ಹೊಸ ಜಾಗತಿಕ ಚಲನಶೀಲತೆಯನ್ನು ರೂಪಿಸಲಿದೆ.

ಈ ಹಿನ್ನೆಲೆಯಲ್ಲಿ, 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (ಐಎಂಇಸಿ) ಯೋಜನೆಯು ಆಧುನಿಕ ಸಾರಿಗೆ, ಮೂಲಸೌಕರ್ಯ, ಡಿಜಿಟಲ್ ಜಾಲ, ಇಂಧನ ವ್ಯವಸ್ಥೆಗಳು ಮತ್ತು ಬಲಿಷ್ಠ ಪೂರೈಕೆ ಸರಪಳಿಗಳ ಮೂಲಕ ನಮ್ಮ ಪ್ರದೇಶಗಳನ್ನು ಸಂಪರ್ಕಿಸುವ ಒಂದು ದೊಡ್ಡ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಈ ದೃಷ್ಟಿಕೋನವನ್ನು ನನಸಾಗಿಸಲು ಇತರ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಭಾರತ ಮತ್ತು ಇಟಲಿ ಬದ್ಧವಾಗಿವೆ.

ನಮ್ಮ ರಾಷ್ಟ್ರಗಳ ನಡುವಿನ ಆಳವಾದ ಪಾಲುದಾರಿಕೆ ಹಾಗೂ ಶಾಶ್ವತ ಸಾಂಸ್ಕೃತಿಕ ಬಾಂಧವ್ಯದ ಶಕ್ತಿಯನ್ನು ಆಧರಿಸಿ, ನಾವು ನಮ್ಮ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ, 'ಧರ್ಮ' ಎಂಬ ಪರಿಕಲ್ಪನೆಯು ನಮ್ಮ ಕರ್ತವ್ಯಗಳಿಗೆ ಮಾರ್ಗದರ್ಶನ ನೀಡಬೇಕಾದ ಜವಾಬ್ದಾರಿಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ; ಹಾಗೆಯೇ 'ವಸುಧೈವ ಕುಟುಂಬಕಂʼ ಎಂಬ ಉದಾತ್ತ ತತ್ವವು ಈ ಅಂತರ್ ಸಂಪರ್ಕಿತ ಡಿಜಿಟಲ್ ಯುಗದಲ್ಲಿ ಅತ್ಯಂತ ಶಕ್ತಿಯುತವಾಗಿ ಪ್ರತಿಧ್ವನಿಸುತ್ತದೆ. ಇಂತಹ ಉನ್ನತ ಮೌಲ್ಯಗಳು ನವೋದಯ ಕಾಲಘಟ್ಟದಲ್ಲಿ ಬೇರೂರಿರುವ ಇಟಲಿಯ ಮಾನವತಾವಾದಿ ಸಂಪ್ರದಾಯದಲ್ಲಿ ಸ್ವಾಭಾವಿಕವಾಗಿ ಪ್ರತಿಧ್ವನಿಸುತ್ತವೆ; ಇದು ಪ್ರತಿಯೊಬ್ಬ ವ್ಯಕ್ತಿಯ ಘನತೆ ಹಾಗೂ ಜನರನ್ನು ಮತ್ತು ಸಮಾಜಗಳನ್ನು ಒಂದುಗೂಡಿಸುವ ಸಂಸ್ಕೃತಿಯ ಅನನ್ಯ ಶಕ್ತಿಯನ್ನು ಎತ್ತಿಹಿಡಿಯುತ್ತದೆ. ಆದುದರಿಂದ, ನಮ್ಮ ಈ ಹಂಚಿಕೆಯ ದೃಷ್ಟಿಕೋನವು ನಮ್ಮ ಜನ ಸಾಮಾನ್ಯರನ್ನು ಕೇಂದ್ರಬಿಂದುವಾಗಿರಿಸಿಕೊಂಡು, ಸದೃಢ ಹಾಗೂ ಭವಿಷ್ಯದತ್ತ ಮುಖ ಮಾಡಿದ ಒಂದು ನೂತನ ಭಾರತ-ಇಟಲಿ ಪಾಲುದಾರಿಕೆಗೆ ಭದ್ರವಾದ ಅಡಿಪಾಯವನ್ನು ಹಾಕುವ ಧ್ಯೇಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.