ನವದೆಹಲಿ: ‘ಭಾರತ ಮತ್ತು ಇಟಲಿ ನಡುವಿನ ಬಾಂಧವ್ಯ ಈಗ ನಿರ್ಣಾಯಕ ಹಂತ ತಲುಪಿದೆ. ಉಭಯ ದೇಶಗಳ ನಡುವಿನ ಸೌಹಾರ್ದಯುತ ಮೈತ್ರಿಯು ಈಗ ವಿಶೇಷವಾದ ರಕ್ಷಣಾತ್ಮಕ ಪಾಲುದಾರಿಕೆಯಾಗಿ ಹೊರಹೊಮ್ಮಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಪ್ರತಿಪಾದಿಸಿದ್ದಾರೆ.

ಉಭಯ ನಾಯಕರು, ಭಾರತ ಮತ್ತು ಇಟಲಿ ಮಾಧ್ಯಮಗಳಿಗೆ ಜಂಟಿಯಾಗಿ ಬರೆದಿರುವ ಲೇಖನದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ. ಆದರೆ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿನಿರಂತರ ವಿನಿಮಯಗಳಿಂದಾಗಿ ಭಾರತ ಮತ್ತು ಇಟಲಿ ನಡುವಿನ ಪಾಲುದಾರಿಕೆ ಗಟ್ಟಿಗೊಂಡಿದೆ’ ಎಂದು ಮೋದಿ ಹಾಗೂ ಮೆಲೊನಿ ಹೇಳಿದ್ದಾರೆ.

‘ಕ್ರಿಯಾಶೀಲವಾದ ಆರ್ಥಿಕತೆ, ಸೃಜನಶೀಲತೆಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆ ಹಾಗೂ ಶತಮಾನಗಳಷ್ಟು ಹಳೆಯದಾದ ನಮ್ಮ ನಾಗರಿಕತೆಗಳು ಹೊಂದಿರುವ ಜ್ಞಾನ ಮತ್ತು ಅನುಭವದಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯ ಹೊಸ ಎತ್ತರಕ್ಕೆ ಏರಿದೆ’ ಎಂದು ಅವರು ಬರೆದಿದ್ದಾರೆ.

‘ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸದೃಢಗೊಳಿಸಲು ನಾವು ಬದ್ಧರಾಗಿದ್ದೇವೆ. ವಿನ್ಯಾಸ ಹಾಗೂ ತಯಾರಿಕೆ ಕ್ಷೇತ್ರದಲ್ಲಿ ಇಟಲಿಯ ಸಾಮರ್ಥ್ಯ ಅಗಾಧವಾದುದು. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತದಲ್ಲಿ ಎಂಜಿನಿಯರಿಂಗ್ ಪ್ರತಿಭೆಗಳಿಗೆ ಕೊರತೆ ಇಲ್ಲ. ಉದ್ಯಮಶೀಲತೆಗೆ ಪೂರಕವಾದ ಪರಿಸರವೂ ಇದೆ. ಈ ಸಾಮರ್ಥ್ಯಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸುವುದು ಎರಡೂ ದೇಶಗಳ ಗುರಿಯಾಗಿದೆ’ ಎಂದು ಅವರು ಲೇಖನದಲ್ಲಿ ವಿವರಿಸಿದ್ದಾರೆ.

ಲೇಖನದ ಪ್ರಮುಖ ಅಂಶಗಳು

ಭಾರತ ಮತ್ತು ಇಟಲಿ ನಡುವಿನ ವ್ಯಾಪಾರದ ಪ್ರಮಾಣವನ್ನು 2029ರ ವೇಳೆಗೆ ₹2.24 ಲಕ್ಷ ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ

ರಕ್ಷಣೆ ಏರೋಸ್ಪೇಸ್ ಶುದ್ಧ ತಂತ್ರಜ್ಞಾನಗಳು ಆಟೊಮೋಟಿವ್ ಬಿಡಿಭಾಗಗಳ ತಯಾರಿಕೆ ರಾಸಾಯನಿಕಗಳು ಔಷಧಗಳು ಜವಳಿ ಕೃಷಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಣೆ

ಕೃತಕ ಬುದ್ಧಿಮತ್ತೆಯ(ಎ.ಐ) ಅಭಿವೃದ್ಧಿ ಮತ್ತು ಬಳಕೆಯು ಮಾನವ ಕೇಂದ್ರಿತವಾಗಿರಬೇಕು. ಇದನ್ನು ಖಾತ್ರಿಪಡಿಸಲು ಉಭಯ ದೇಶಗಳು ಶ್ರಮಿಸಲಿವೆ

ಡಿಜಿಟಲ್ ಕ್ಷೇತ್ರದಲ್ಲಿ ಸಹಕಾರ ಸೈಬರ್ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು

ಭಾರತವು ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಂತರಿಕ್ಷ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇಟಲಿಯ ಸಾಧನೆ ದೊಡ್ಡದು. ಉಭಯ ದೇಶಗಳ ನಡುವಿನ ಸಹಕಾರ ವೃದ್ಧಿಯಿಂದ ಈ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗಾವಕಾಶ ಸೃಷ್ಟಿ ಸಾಧ್ಯ

ರತೀಯ ಸಂಸ್ಕೃತಿಯಲ್ಲಿರುವ ‘ಧರ್ಮ’ದ ಪರಿಕಲ್ಪನೆ ಪ್ರತಿಯೊಬ್ಬರಲ್ಲಿ ಹೊಣೆಗಾರಿಕೆಯನ್ನು ಜಾಗೃತಗೊಳಿಸುತ್ತದೆ. ‘ವಸುಧೈವ ಕುಟುಂಬಕಂ’ ತತ್ವವು ವಿಶ್ವವೇ ಒಂದು ಕುಟುಂಬವೆಂದು ಸಾರುತ್ತದೆ. ಇಟಲಿಯ ಪರಂಪರೆ ಕೂಡ ಇವೇ ಮೌಲ್ಯಗಳನ್ನು ಪ್ರತಿಧ್ವನಿಸುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.