ಮುಂಬೈ: ನಗರದಲ್ಲಿ ಸೆಪ್ಟಂಬರ್ 1ರಂದು ನಡೆಯಲಿರುವ ‘ಇಂಡಿಯಾ’ದ ಸಭೆಯಲ್ಲಿ ವಿಪಕ್ಷಗಳ ಮೈತ್ರಿಕೂಟದ ಲಾಂಛನವನ್ನು ಅನಾವರಣಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಸಾಂತಾಕ್ರೂಜ್‌ನ ಹೋಟೆಲ್‌ನಲ್ಲಿ ನಡೆಯುವ ‘ಇಂಡಿಯಾ’ದ ಮೂರನೇ ಸಭೆಯಲ್ಲಿ 26 ಅಂಗಪಕ್ಷಗಳ 80ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಇವೇ ಮೂಲಗಳು ಹೇಳಿವೆ.
ಜೂನ್ 23ರಂದು ಪಟ್ನಾದಲ್ಲಿ ‘ಇಂಡಿಯಾ’ದ ಮೊದಲ ಸಭೆ ನಡೆದಿತ್ತು. ಬೆಂಗಳೂರಿನಲ್ಲಿ ಜುಲೈ 17 ಹಾಗೂ 18ರಂದು ಎರಡನೇ ಸಭೆ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.