ನವದೆಹಲಿ : ದೇಶದಲ್ಲಿ ಈ ವರ್ಷ ನೈರುತ್ಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ.

ನೈರುತ್ಯ ಮುಂಗಾರಿನ ಅವಧಿಯಲ್ಲಿ ದೇಶದ ವಾಡಿಕೆ ಮಳೆ 80 ಸೆಂ.ಮೀ. 1971ರಿಂದ 2020ರವರೆಗಿನ ದೀರ್ಘಾವಧಿಯ ಸರಾಸರಿ ತೆಗೆದುಕೊಂಡರೆ 87 ಸೆಂ.ಮೀ. ವರ್ಷಧಾರೆ ಆಗಿದೆ.

‘ಪ್ರಸಕ್ತ ವರ್ಷ ವಾಡಿಕೆಯ ಪ್ರಮಾಣದಲ್ಲಿ ಶೇ 92ರಷ್ಟು ವರ್ಷಧಾರೆ ಆಗಲಿದೆ. ಈ ಪ್ರಮಾಣದಲ್ಲಿ ಶೇ 5ರಷ್ಟು ವ್ಯತ್ಯಾಸವಾಗಬಹುದು’ ಎಂದು ಐಎಂಡಿಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಮರಾವತಿ (ಪಿಟಿಐ): ಆಂಧ್ರಪ್ರದೇಶದ ಹಲವೆಡೆ ತೀವ್ರ ತಾಪಮಾನ ದಾಖಲಾಗಿದೆ. 51 ಮಂಡಲಗಳಲ್ಲಿ ಉಷ್ಣಗಾಳಿಯ ತೀವ್ರತೆ ಹೆಚ್ಚಿದ್ದರೆ, 49 ಮಂಡಲಗಳಲ್ಲಿ ತೀವ್ರತಾಪಮಾನ ದಾಖಲಾಗಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಎಪಿಎಸ್ಡಿಎಂಎ ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ಸೋಮವಾರ ತಿಳಿಸಿದ್ದಾರೆ.

ಕಡಪ ಜಿಲ್ಲೆಯ ಪೊಟ್ಟಿಪಾಡಿನಲ್ಲಿ 43.8 ಡಿಗ್ರಿ ಸೆಲ್ಸಿಯಸ್, ತಿರುಪತಿ ಜಿಲ್ಲೆಯ ವರದಯ್ಯಪಾಳ್ಯದಲ್ಲಿ 43.1, ನಂದ್ಯಾಲದಲ್ಲಿ 42.9, ಅನಂತಪುರ ಜಿಲ್ಲೆಯ ತೇರಣಪಲ್ಲಿಯಲ್ಲಿ 42.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವು ಭಾನುವಾರ ದಾಖಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.