ನವದೆಹಲಿ: ಚೀನಾ ಸೇರಿದಂತೆ ಭಾರತದೊಂದಿಗೆ ಭೂ ಗಡಿ ಹಂಚಿಕೊಂಡಿರುವ ಎಲ್ಲ ದೇಶಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ನಿಯಮಗಳನ್ನು ಸಡಿಲಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆರ್ಥಿಕ ಬೆಳವಣಿಗೆ ಹೆಚ್ಚಿಸಲು, ವಿದೇಶಿ ಹೂಡಿಕೆ ಪ್ರಸ್ತಾವಗಳಿಗೆ ವೇಗವಾಗಿ ಅನುಮೋದನೆ ನೀಡಲು 2020ರ ಪತ್ರಿಕಾ ಟಿಪ್ಪಣಿ–3ಕ್ಕೆ ತಿದ್ದುಪಡಿ ತರಲಾಗಿದೆ.

ಈ ತಿದ್ದುಪಡಿ ಅನ್ವಯ, ಯಾವುದೇ ವಿದೇಶಿ ಕಂಪನಿ ಭಾರತದಲ್ಲಿ ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮುನ್ನ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಭಾರತದೊಂದಿಗೆ ಭೂ ಗಡಿ ಹಂಚಿಕೊಂಡಿರುವ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್, ನೇಪಾಳ, ಮಯನ್ಮಾರ್ ಮತ್ತು ಆಘ್ಗಾನಿಸ್ತಾನದಿಂದ ಹೆಚ್ಚಿನ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಎಫ್ಡಿಐ ನಿಯಮಗಳನ್ನು ಸಡಿಲಿಸಲಾಗಿದೆ.

ಚೀನಾವು ಭಾರತದಲ್ಲಿ ಎಫ್ಡಿಐ ಮೂಲಕ 2000ರ ಏಪ್ರಿಲ್ನಿಂದ 2025ರ ಡಿಸೆಂಬರ್ವರೆಗೆ ಒಟ್ಟು 2.51 ಬಿಲಿಯನ್ ಡಾಲರ್ (ಅಂದಾಜು ₹23 ಸಾವಿರ ಕೋಟಿ) ಹೂಡಿಕೆ ಮಾಡಿದೆ. ಈ ಅವಧಿಯಲ್ಲಿ ಭಾರತಕ್ಕೆ ಹರಿದುಬಂದ ಒಟ್ಟು ಎಫ್ಡಿಐನಲ್ಲಿ ಚೀನಾದ ಪಾಲು ಶೇ 0.32ರಷ್ಟಿದೆ. ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಮಾಡಿರುವ ದೇಶಗಳ ಪಟ್ಟಿಯಲ್ಲಿ ಚೀನಾ 23ನೇ ಸ್ಥಾನದಲ್ಲಿದೆ.

ದ್ವಿಪಕ್ಷೀಯ ಸಂಬಂಧ ಸುಧಾರಣೆ:

ಗಾಲ್ವಾನ್ ಕಣಿವೆಯಲ್ಲಿ 2020ರ ಜೂನ್ನಲ್ಲಿ ನಡೆದಿದ್ದ ಘರ್ಷಣೆಯ ನಂತರ ಭಾರತ– ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಹಳಸಿತ್ತು. ಭಾರತವು ಟಿಕ್ಟಾಕ್, ವಿ–ಚಾಟ್ ಸೇರಿದಂತೆ ಚೀನಾದ 200ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಷನ್ಗಳ ಮೇಲೆ ನಿರ್ಬಂಧ ಹೇರಿತ್ತು. ಬೆನ್ನಲ್ಲೇ, ಚೀನಾದಿಂದ ಭಾರತಕ್ಕೆ ಎಫ್ಡಿಐ ಒಳಹರಿವು ಗಣನೀಯವಾಗಿ ಕಡಿಮೆಯಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಉತ್ತಮಗೊಂಡಿದ್ದು, ಚೀನಾವು ಭಾರತದ ಎರಡನೆಯ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ.

2025–26 ಆರ್ಥಿಕ ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ಚೀನಾಕ್ಕೆ ಭಾರತದ ರಫ್ತು ಶೇ 38.37 ರಷ್ಟು ಹಾಗೂ ಆಮದು ಶೇ 13.82ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.