ಮಂಗಳೂರು: ‘ವಿಶ್ವದ ಅತಿ ಹೆಚ್ಚು ರಸ್ತೆ ಅಪಘಾತ ಪ್ರಕರಣಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಭಾರತವು ಐದನೇ ಸ್ಥಾನದಲ್ಲಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ’ ಎಂದು ಯುನಿಸೆಫ್ನ ಆರೋಗ್ಯ ತಜ್ಞ ಡಾ.ಶ್ರೀಧರ್ ರ್ಯಾವಂಕಿ ಹೇಳಿದರು.

ಮೈಸೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು, ಯುನಿಸೆಫ್, ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಮಾಧ್ಯಮ ಅಧ್ಯಯನ ವಿಭಾಗದ ಸಹಯೋಗದಲ್ಲಿ ಬುಧವಾರ ಏರ್ಪಡಿ ಸಿದ್ದ ‘ಹದಿಹರೆಯದವರ ಆರೋಗ್ಯ, ಪೌಷ್ಟಿಕತೆ: ಸಾಂಕ್ರಾಮಿಕವಲ್ಲದ ಕಾಯಿಲೆ ಮತ್ತು ರಸ್ತೆ ಸುರಕ್ಷತೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶೇ 80ರಷ್ಟು ರಸ್ತೆ ಅಪಘಾತದಿಂದ ಗಾಯಗಳಾಗುತ್ತಿದ್ದರೆ, ಶೇ 20ರಷ್ಟು ಬೆಂಕಿ, ಕಟ್ಟಡ ಕುಸಿತದಂತಹ ಘಟನೆಗಳಿಂದ ಗಾಯಗಳಾಗುತ್ತವೆ. ದೇಶದಲ್ಲಿ 2022–23ನೇ ಸಾಲಿನಲ್ಲಿ 1,68,492 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದರು.

ದೇಶದಲ್ಲಿ ಪ್ರತಿದಿನ 1,317 ರಸ್ತೆ ಅಪಘಾತಗಳಾಗುತ್ತಿದ್ದು, 474 ಸಾವುಗಳಾಗುತ್ತಿವೆ. ಪ್ರತಿ ಗಂಟೆಗೆ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ಸಾಯುತ್ತಿರುವವರಲ್ಲಿ ಶೇ 75ರಷ್ಟು ಜನ 25ರಿಂದ 45ರ ವಯೋಮಾನದವರಾಗಿದ್ದು, ಇವರ ಕುಟುಂಬಗಳು ತಮ್ಮ ಆಧಾರ ಸ್ತಂಭಗಳಾಗಿದ್ದ ವ್ಯಕ್ತಿಗಳನ್ನೇ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಹೇಳಿದರು.

ಶೇ 56ರಷ್ಟು ಮಕ್ಕಳು ನಿತ್ಯ ಕಾಲ್ನಡಿಗೆಯಲ್ಲಿ ಶಾಲೆಗಳಿಗೆ ಹೋಗುತ್ತಾರೆ. ಅಪಘಾತಕ್ಕೆ ಒಳಗಾಗುವ ಮಕ್ಕಳಲ್ಲಿ ಶೇ 25ರಷ್ಟು ಮಕ್ಕಳು 14 ವರ್ಷ ವಯಸ್ಸಿನೊಳಗಿನವರು, ಶೇ 75ರಷ್ಟು ಮಕ್ಕಳು 14ರಿಂದ 17ವರ್ಷ ವಯಸ್ಸಿನೊಳಗಿನವರಾಗಿದ್ದಾರೆ. ಈ ಯಾವ ವಿಚಾರಗಳು ನಮ್ಮ ಚುನಾವಣಾ ವಿಚಾರಗಳಾಗುವುದಿಲ್ಲ ಎಂದರು.

ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ಎಸ್.ಸಪ್ನಾ ಮಾತನಾಡಿ, ಬಾಲಕಾರ್ಮಿಕ, ಬಾಲ್ಯವಿವಾಹ ಪದ್ಧತಿ, ಅಪೌಷ್ಟಿಕತೆ, ಮಕ್ಕಳ ಲೈಂಗಿಕ ಶೋಷಣೆ ಹೆಚ್ಚಾಗುತ್ತಿದೆ. ಹಾಗಾಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಾಧ್ಯಮಗಳೂ ಹೆಚ್ಚು ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರಿಗೆ ಪ್ರಮಾಣಪತ್ರ ವಿತರಿಸ ಲಾಯಿತು. ಯುನಿಸೆಫ್ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಂವಹನ ತಜ್ಞ ಪ್ರಸೂನ್ ಸೇನ್, ಸೇಂಟ್ ಅಲೋಶಿಯಸ್ ಪರಿಗಣಿತ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ, ರಶ್ಮಿ, ರಾಕೇಶ್, ಮಂಜುನಾಥ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-29-43029222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.