ನವದೆಹಲಿಯಲ್ಲಿ ಭಾನುವಾರ ದ್ವಿಪಕ್ಷೀಯ ಮಾತುಕತೆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಾತನಾಡಿದರು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಇದ್ದರು ಪಿಟಿಐ ಚಿತ್ರ
ವ್ಯಾಪಾರದ ವಿಚಾರವಾಗಿ ಭಾರತದೊಂದಿಗೆ ಸಂಘರ್ಷಕ್ಕೆ ದಾರಿ ಮಾಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರಲಿಲ್ಲ. ಅಮೆರಿಕದ ಆರ್ಥಿಕತೆಗೆ ವೇಗ ನೀಡುವಲ್ಲಿನ ಸಮಸ್ಯೆಯನ್ನು ಅವರು ಗುರುತಿಸಿದ್ದರು. ಈ ಸಮಸ್ಯೆಗೆ ಜಾಗತಿಕ ದೃಷ್ಟಿಕೋನದಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.