ನವದೆಹಲಿ: ಸೂರ್ಯನ ಅಧ್ಯಯನ ನಡೆಸಲಿರುವ ಆದಿತ್ಯ ಎಲ್-1 ನೌಕೆಯು ಭೂಮಿಯ ಪ್ರಭಾವ ವಲಯವನ್ನು ದಾಟಿ ಸೂರ್ಯನತ್ತ ಯಶಸ್ವಿಯಾಗಿ ಪಯಣ ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
‘ಚಂದ್ರಯಾನ 3’ರ ಲ್ಯಾಂಡರ್ ಮತ್ತು ರೋವರ್ ಜೊತೆ ಮತ್ತೆ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿ ಇಸ್ರೊ ವಿಜ್ಞಾನಿಗಳು ನಿರಾಶೆ ಅನುಭವಿಸಿರುವ ಬೆನ್ನಲ್ಲೇ, ಆದಿತ್ಯ ಎಲ್1 ನೌಕೆಯು ಭೂಮಿ ಮತ್ತು ಸೂರ್ಯನ ನಡುವಿನ ಲಗ್ರಾಂಜಿಯನ್ ಬಿಂದು ಎಲ್1 ಕಡೆಗೆ ಪ್ರಯಾಣ ಆರಂಭಿಸಿದೆ.
ಸೆಪ್ಟೆಂಬರ್ 2ರಂದು ಸೂರ್ಯನ ಅಧ್ಯಯನಕ್ಕೆ ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಪ್ರಸ್ತುತ ನೌಕೆಯು ಭೂಮಿಯಿಂದ 9.20 ಲಕ್ಷ ಕಿ.ಮೀ ದೂರವನ್ನು ಪೂರ್ಣಗೊಳಿಸಿದೆ. ಸೂರ್ಯನಡೆಗಿನ ಒಟ್ಟಾರೆ ಪಯಣದಲ್ಲಿ ಅರ್ಧದಷ್ಟನ್ನು ಪೂರ್ಣಗೊಳಿಸಿದೆ ಎಂದು ಇಸ್ರೊ ತಿಳಿಸಿದೆ.
ಇಸ್ರೊ ಎರಡನೇ ಬಾರಿಗೆ ಭೂಮಿಯ ಗೋಳದ ಪ್ರಭಾವದಿಂದ ಬಾಹ್ಯಾಕಾಶ ನೌಕೆಯೊಂದನ್ನು ಯಶಸ್ವಿಯಾಗಿ ಹೊರಗೆ ಕಳುಹಿಸಿದ ಶ್ರೇಯಕ್ಕೆ ಪಾತ್ರವಾಗಿದೆ. ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಮೊದಲ ಬಾರಿಗೆ ಭೂಮಿಯ ಪ್ರಭಾವದಿಂದ ಹೊರಗೆ ಕಳುಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.