ಮುಂಬೈ: ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದಲ್ಲಿದ್ದ ಸುಮಾರು 160 ಪ್ರಯಾಣಿಕರು ಭಾನುವಾರ ರಾತ್ರಿ ಕತ್ತಲಿನಲ್ಲಿ ಕಾಲ ಕಳೆಯಬೇಕಾಯಿತು.

ಇನ್ನೇನು ವಿಮಾನ ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಪೂರೈಸುವ ‘ಗ್ರೌಂಡ್ ಪವರ್ ಯೂನಿಟ್’ (ಜಿಪಿಯು) ಕೈಕೊಟ್ಟಿದ್ದರಿಂದ ಪ್ರಯಾಣಿಕರು ತೀವ್ರವಾಗಿ ಬೆವತು ಸುಸ್ತಾದರು ಎಂದು ಮೂಲಗಳು ತಿಳಿಸಿವೆ.

ಇಂಡಿಗೊ 6E 657 ವಿಮಾನವು ರಾತ್ರಿ 8.40ಕ್ಕೆ ವಡೋದರಾದಿಂದ ದೆಹಲಿಗೆ ಹೊರಡಬೇಕಿತ್ತು. ಆದರೆ, ವಿಮಾನದಲ್ಲಿ ವಿದ್ಯುತ್ ಪೂರೈಕೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಪಿಯುನಲ್ಲಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲು ಎಂಜಿನಿಯರ್ಗಳಿಗೆ ಅರ್ಧ ಗಂಟೆ ಬೇಕಾಯಿತು. ಈ ಅವಧಿಯಲ್ಲಿ ವಿಮಾನದ ಕ್ಯಾಬಿನ್ನಲ್ಲಿ ಸಂಪೂರ್ಣ ಕತ್ತಲೆ ಆವರಿಸಿತ್ತು. ಎಸಿ ಕೂಡ ಕೆಲಸ ಮಾಡದ ಕಾರಣ ಪ್ರಯಾಣಿಕರು ತೀವ್ರವಾಗಿ ಬೆವರುತ್ತಿದ್ದರು ಎಂದು ಅಧಿಕಾರಿ ವಿವರಿಸಿದ್ದಾರೆ.

ಜಿಪಿಯು ಎಂಬುದು ವಿಮಾನವನ್ನು ಗೇಟ್ ಬಳಿ ನಿಲ್ಲಿಸಿದಾಗ ಅದಕ್ಕೆ ಸಂಪರ್ಕಿಸುವ ಒಂದು ಸಾಧನವಾಗಿದೆ. ಇದು ವಿಮಾನದ ಎಂಜಿನ್ ಅಥವಾ ಆನ್ಬೋರ್ಡ್ ಜನರೇಟರ್ ಅನ್ನು ಚಲಾಯಿಸುವ ಅಗತ್ಯವಿಲ್ಲದೇ, ವಿಮಾನದ ಲೈಟ್ಗಳು, ಏವಿಯಾನಿಕ್ಸ್ (ವಿದ್ಯುನ್ಮಾನ ಉಪಕರಣಗಳು) ಮತ್ತು ಹವಾನಿಯಂತ್ರಣ (ಎಸಿ) ನಿರ್ವಹಿಸಲು ಅಗತ್ಯವಾದ ವಿದ್ಯುತ್ ಶಕ್ತಿಯನ್ನು ಪೂರೈಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.