ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ | ಮೊಬೈಲ್‌ ಬಳಸಿದ ಮಗ; ಕುಡುಗೋಲಿನಿಂದ ಹಲ್ಲೆ ಮಾಡಿದ ತಾಯಿ

Published 27 ಆಗಸ್ಟ್ 2024, 15:23 IST
Last Updated 27 ಆಗಸ್ಟ್ 2024, 15:23 IST
ಅಕ್ಷರ ಗಾತ್ರ

ಇಂದೋರ್‌: ತನ್ನ ಮೊಬೈಲ್‌ ಬಳಸಿದ ಮಗನ ಮೇಲೆ ಕುಪಿತಗೊಂಡ ಮಹಿಳೆಯೊಬ್ಬಳು, ಕುಡುಗೋಲಿನಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇಲ್ಲಿನ ಸಿಮ್ರಾನ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಬಾಲಕನೊಬ್ಬ ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ.

ಬಾಲಕನ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಲಾಗಿದೆ. ಆರೋಪಿ ಮಹಿಳೆಯನ್ನು ಈವರೆಗೆ ಬಂಧಿಸಲಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ದೂರುದಾರ ಬಾಲಕನು ಸದ್ಯ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಾಲೆಯಿಂದ ಯಾವುದಾದರೂ ಸಂದೇಶಗಳು ಬಂದಿದ್ದಾವೆಯೇ ಎಂದು ತಿಳಿಯಲು ಆತ ತನ್ನ ತಾಯಿಯ ಮೊಬೈಲ್‌ ಬಳಸುತ್ತಿದ್ದ. ಆಗ, ತನ್ನ ಮೊಬೈಲ್‌ ಅನ್ನು ಏಕೆ ಮುಟ್ಟಿರುವೆ ಎಂದು ಪ್ರಶ್ನಿಸಿದ ಆಕೆ, ಕುಡುಗೋಲು ಬಳಸಿ ಹಲ್ಲೆ ನಡೆಸಿದ್ದಾಳೆ. ಘಟನೆಯಲ್ಲಿ ಬಾಲಕನ ಎಡಗೈಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಸಿಮ್ರಾನ್‌ ಠಾಣಾಧಿಕಾರಿ ಅಮಿತ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT