ಬರೇಲಿ: ಉತ್ತರ ಪ್ರದೇಶದ ಬರೇಲಿಯ ಕ್ವಿಲಾ ಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಒಂದು ತಿಂಗಳ ಹಸುಗೂಸು ಹಸಿವಿನಿಂದ ಮೃತಪಟ್ಟಿದೆ.

ಶಾದಾಬ್ ಮತ್ತು ಹೀನಾ (ಪೋಷಕರು) ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಿಕ್ಷೆ ಬೇಡಿ ಜೀವನ ಕಟ್ಟಿಕೊಂಡಿದ್ದವರು. ಅಂದು (ಶನಿವಾರ) ಘಟನೆ ನಡೆದ ದಿನ ತಮ್ಮ ಮೂವರು ಮಕ್ಕಳೊಂದಿಗೆ ಭಿಕ್ಷೆ ಬೇಡಲು ಹೋಗಿದ್ದರು. ನವಜಾತ ಶಿಶುವನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದರು.

ಸಂಜೆ ಪೋಷಕರು ಮನೆಗೆ ಮರಳಿದಾಗ ಮಗು ಮೃತಪಟ್ಟಿರುವುದು ಕಂಡುಬಂದಿದೆ.
.ಪಾಕಿಸ್ತಾನದಲ್ಲಿ ಅಮೆರಿಕ-ಇರಾನ್ ಮಾತುಕತೆ ಸಾಧ್ಯವೇ? ಶ್ವೇತಭವನದ ಉತ್ತರ ಹೀಗಿತ್ತು.ಪಂಜಾಬ್ನಲ್ಲೂ Statue of Liberty: ಎನ್ಆರ್ಐ ಯೋಜನೆ ಹಿಂದಿದೆ ಕಾರಣ.
ವರದಿಗಳ ಪ್ರಕಾರ, ಮಗು ಅವಧಿಗೂ ಮುನ್ನವೇ ಜನಿಸಿದ್ದು, ಅತ್ಯಂತ ಅಶಕ್ತವಾಗಿತ್ತು. ಶಿಶು ದೀರ್ಘಕಾಲ ಹಸಿವಿನಿಂದಾಗಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಮಗು ತೀವ್ರ ಅಪೌಷ್ಟಿಕತೆಯಿಂದ ಕೂಡಿತ್ತು. ಆದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ.

ಈ ಕುಟುಂಬವು ತೀವ್ರ ಬಡತನದಲ್ಲಿತ್ತು. ಭಿಕ್ಷಾಟನೆಯಿಂದಲೇ ಜೀವನ ಸಾಗಿಸುತ್ತಿತ್ತು. ಅಲ್ಲದೆ, ಪೋಷಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
.ಮತ್ತಷ್ಟು ಇಳೀತು ಚಿನ್ನದ ರೇಟು: ಆಭರಣ ಖರೀದಿಗಿದು ಒಳ್ಳೇ ಸಮಯವೇ?.₹2.9 ಲಕ್ಷದ ಗ್ರಾಫಿಕ್ಸ್ ಕಾರ್ಡ್ ಆರ್ಡರ್: ಸಿಕ್ಕಿದ್ದು ಡಿಟರ್ಜೆಂಟ್ ಪೌಡರ್!.ಧುರಂಧರ್ 2 ಬಿಡುಗಡೆ ಬೆನ್ನಲ್ಲೆ ಪಾಕ್ನಲ್ಲಿ ಭಾರತೀಯ ಗೂಢಚಾರರಿಗಾಗಿ ಹುಡುಕಾಟ.IPL 2026| ಇಲ್ಲಿ ಮಾತ್ರ ಟಿಕೆಟ್ ಖರೀದಿಸಿ, ಮೋಸದ ಜಾಲಕ್ಕೆ ಒಳಗಾಗಬೇಡಿ: RCB.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.