ನವದೆಹಲಿ: ದಕ್ಷಿಣ ದೆಹಲಿಯ ಪ್ರತಿಷ್ಠಿತ ಕೈಲಾಶ್ ಹಿಲ್ಸ್ನಲ್ಲಿ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯ 22 ವರ್ಷದ ಪುತ್ರಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಹುಲ್ ಮೀನಾ (19) ಆನ್ಲೈನ್ ಗೇಮ್ಗಳ ವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ.

ರಾಜಸ್ಥಾನದ ಅಲವಾರ ನಗರದಲ್ಲಿ ತನಗೆ ಪರಿಚಯವಿರುವ ವ್ಯಕ್ತಿಯ ಪತ್ನಿ ಮೇಲೆ ರಾತ್ರಿ ಅತ್ಯಾಚಾರ ಎಸಗಿದ ರಾಹುಲ್, ಮರುದಿನ ಬೆಳಿಗ್ಗೆ ದೆಹಲಿಗೆ ತೆರಳಿ, ತಾನು ಹಿಂದೆ ಕೆಲಸ ಮಾಡಿದ್ದ ಮನೆಗೆ ನುಗ್ಗಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈತ ಶಾಲೆ, ಕಾಲೇಜಿನಲ್ಲಿ ಪ್ರತಿಭಾವಂತನಾಗಿದ್ದ. 12 ನೇ ತರಗತಿಯಲ್ಲಿ ಶೇ 92 ರಷ್ಟು ಅಂಕ ತೆಗೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆದರೂ ರಾಹುಲ್ ಮೀನಾ ಕೋಪಿಷ್ಟ ಹಾಗೂ ಭಯಾನಕ ಹಿನ್ನೆಲೆ ಹೊಂದಿದ್ದ. ಆತ ತನ್ನೂರಲ್ಲಿ ಜನರ ಜೊತೆ ಜಗಳ ತೆಗೆಯುತ್ತಾ ಹೆಸರು ಕೆಡಿಸಿಕೊಂಡಿದ್ದ. ಬಳಿಕ ಆನ್ಲೈನ್ ಗೇಮ್ಗಳ ಚಟ ಅಂಟಿಸಿಕೊಂಡು ₹7 ಲಕ್ಷ ಸಾಲ ಮಾಡಿದ್ದ ಎಂದು ಪಿಟಿಐ ವರದಿ ಮಾಡಿದೆ.

ಮೀನಾ ಐಆರ್ಎಸ್ ಅಧಿಕಾರಿಯ ಮನೆಯಲ್ಲಿ ಎಂಟು ತಿಂಗಳು ಕೆಲಸ ಮಾಡಿದ್ದ. ಹಣಕಾಸಿನ ಅವ್ಯವಹಾರದ ಕಾರಣಕ್ಕಾಗಿ ಒಂದು ತಿಂಗಳ ಹಿಂದಷ್ಟೇ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

‘ಆರೋಪಿಯು ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ.ಮೊಬೈಲ್ ಫೋನ್ ಚಾರ್ಜಿಂಗ್ ಕೇಬಲ್ನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಶವವನ್ನು ಲಾಕರ್ ಇದ್ದ ಮತ್ತೊಂದು ಕೋಣೆಗೆ ಎಳೆದುಕೊಂಡು ಹೋಗಿ, ಆಕೆಯ ಬೆರಳಚ್ಚು ಬಳಸಿ ಬಯೋಮೆಟ್ರಿಕ್ ಲಾಕ್ ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಅದು ತೆರೆದಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಂತರ ಲಾಕರ್ ಮುರಿದು, ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಸಂತ್ರಸ್ತೆಯ ಪೋಷಕರು ಮನೆಗೆ ಬರುವ ಸುಮಾರು 30 ನಿಮಿಷಗಳ ಮೊದಲು ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಸುಮಾರು 30 ನಿಮಿಷಗಳ ಕಾಲ ಮನೆ ಒಳಗಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.