ಶ್ರೀನಗರ: ‘ಭಾರತದಲ್ಲಿನ ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಸೇರಿಕೊಂಡರೆ ಬಿಗಿಯಾದ ಭದ್ರತಾ ಪರಿಶೀಲನೆ ಮತ್ತು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ತನಿಖೆಯಿಂದ ತಪ್ಪಿಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ಗಮನ ಹರಿಸಿ’ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ಜಮ್ಮು– ಕಾಶ್ಮೀರದಲ್ಲಿನ ತನ್ನ ಜಾಲದ ಸದಸ್ಯರಿಗೆ ಸೂಚಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನೇರವಾಗಿ ಶಸ್ತ್ರಾಸ್ತ್ರ ದಾಳಿ, ಹಿಂಸಾಚಾರ ದಲ್ಲಿ ಭಾಗಿಯಾಗದಿದ್ದರೂ, ರಹಸ್ಯವಾಗಿ ದ್ದುಕೊಂಡು ಭಯೋತ್ಪಾದಕ ಸಂಘಟನೆ ಗಳಿಗೆ ಹಣಕಾಸಿನ ನೆರವು, ಆಹಾರ, ವಸತಿ, ಸಾರಿಗೆ, ಗುಪ್ತಚರ ಮಾಹಿತಿ ಒದಗಿಸುವ ವ್ಯಕ್ತಿಗಳಿಗೆ (ಒಜಿಡಬ್ಲ್ಯು) ರಾಜಕೀಯ ಮುಖ್ಯವಾಹಿನಿ ಸೇರಿಕೊಳ್ಳು ವಂತೆ ಐಎಸ್ಐ ಸೂಚನೆ ರವಾನಿಸಿದೆ.

‘ಭಯೋತ್ಪಾದನೆಗೆ ಹಣಕಾಸಿನ ಹರಿವು ಮತ್ತು ಜಾಗತಿಕ ಮಟ್ಟದಲ್ಲಿ ಹಣ ಅಕ್ರಮ ವಹಿವಾಟಿನ ಮೇಲೆ ಕಣ್ಣಿರಿಸಿರುವ ’ಎಫ್ಎಟಿಎಫ್‘ ಸಂಸ್ಥೆ ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು ಐಎಸ್ಐ ಮೇಲೆ ನಿರಂತರ ನಿಗಾ ವಹಿಸಿರುವುದರಿಂದ ಐಎಸ್ಐ ತನ್ನ ಕಾರ್ಯತಂತ್ರವನ್ನು ಬದಲಿಸಿಕೊಂಡಿದೆ. ಇತ್ತೀಚೆಗೆ ಶ್ರೀನಗರ ಪೊಲೀಸರು ಬಂಧಿಸಿದ ಐಎಸ್ಐ ಜಾಲದ ಸದಸ್ಯನೊಬ್ಬನನ್ನು ಕೇಂದ್ರ ಭದ್ರತಾ ಸಂಸ್ಥೆಗಳು ವಿಚಾರಣೆಗೊಳಪಡಿಸಿದಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ‘ಒಜಿಡಬ್ಲ್ಯು’ಗಳು ಈಗಾಗಲೇ ರಾಜಕೀಯ ಪಕ್ಷಗಳನ್ನು ಸೇರಿಕೊಂಡಿ ರುವ ಸಂಗತಿ ಬಹಿರಂಗಗೊಂಡಿದೆ.

‘ಒಜಿಡಬ್ಲ್ಯು’ಗಳಲ್ಲಿ ಕೆಲವರು ಈಗಾಗಲೇ ರಾಜಕೀಯ ಪಕ್ಷಗಳ ಭಾಗ ಆಗಿರುವುದರಿಂದ ಅವರನ್ನು ಸುಲಭವಾಗಿ ತನಿಖೆಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ’ ಎಂದು ಪೊಲೀಸರು ತಿಳಿಸಿದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.