ನವದೆಹಲಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಸಂಘರ್ಷವು ಭಾರತದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

‘ಹರ್ಮುಜ್ ಜಲಸಂಧಿ ಮುಚ್ಚಿದರೆ, ಅದು ಭಾರತದ ಆರ್ಥಿಕತೆ ಮತ್ತು ಇಂಧನ ಪೂರೈಕೆಯ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್ಪಿಜಿ ಲಭ್ಯತೆಯ ಬಗ್ಗೆ ಈಗಾಗಲೇ ಆತಂಕ ಶುರುವಾಗಿದ್ದು, ಸಂಘರ್ಷ ತೀವ್ರಗೊಂಡರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಇಂಧನ ಭದ್ರತೆ ಎಲ್ಲಾ ದೇಶಗಳ ಮೂಲಭೂತ ಆದ್ಯತೆಯಾಗಿದೆ’ ಎಂದು ಹೇಳಿದರು.

‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಬೇಕೇ? ಅಥವಾ ಬೇಡವೇ? ಎಂಬುದನ್ನು ನಿರ್ಧರಿಸಲು ಅಮೆರಿಕಕ್ಕೆ ಅವಕಾಶ ನೀಡಲಾಗುತ್ತಿದೆ. ಇದನ್ನು ನಿರ್ಧರಿಸಲು ಭಾರತ ಸ್ವತಂತ್ರವಾಗಿದೆ. ಆದರೆ, ಈ ಹಕ್ಕನ್ನು ಈಗ ಒತ್ತೆ ಇಡಲಾಗಿದೆ. ಭಾರತದಂತಹ ಸಾರ್ವಭೌಮ ರಾಷ್ಟ್ರವು ಯಾರೊಂದಿಗೆ ವ್ಯವಹರಿಸಬೇಕು ಎಂದು ನಿರ್ಧರಿಸಲು ಬೇರೆ ಯಾವುದೋ ದೇಶದ ಅಧ್ಯಕ್ಷರ ಅನುಮತಿಗಾಗಿ ಏಕೆ ಕಾಯಬೇಕು?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.