ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ವಿಎಸ್‌–01’ ಯಶಸ್ವಿ ಉಡಾವಣೆ

Published 29 ಮೇ 2023, 16:55 IST
Last Updated 29 ಮೇ 2023, 16:55 IST
ಅಕ್ಷರ ಗಾತ್ರ

ಚೆನ್ನೈ: ‘ಎನ್‌ವಿಎಸ್‌–01’ ನ್ಯಾವಿಗೇಷನ್‌ (ಪಥದರ್ಶಕ) ಉಪಗ್ರಹದ ಎರಡನೇ ಪೀಳಿಗೆಯ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ ರಾಕೆಟ್‌ ಸೋಮವಾರ ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿತು.

ಉಡಾವಣೆಯಾದ ಸುಮಾರು 19 ನಿಮಿಷದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ರಾಕೆಟ್‌ನ ಯಶಸ್ವಿ ಉಡ್ಡಯನದ ಕುರಿತು ಮಾಹಿತಿ ನೀಡಿತು.

ಜಿಎಸ್‌ಎಲ್‌ವಿನ 15ನೇ ಉಡಾವಣೆ ಇದಾಗಿದೆ. ಜೊತೆಗೆ, ಎನ್‌ಎವಿಐಸಿಯ ಎರಡನೇ ಪೀಳಿಗೆ ಉಪಗ್ರಹದ ಮೊದಲ ಉಡ್ಡಾಯನ ಇದಾಗಿದೆ. ಭೂಮಿ, ವಾಯು ಪ್ರದೇಶ ಹಾಗೂ ಜಲ ಮಾರ್ಗದ ಪಥದರ್ಶನದಲ್ಲಿ ಈ ಉಪಗ್ರಹ ಸಹಕಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT