ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಟಿಎಂಸಿ ಅಭ್ಯರ್ಥಿ ನಿವಾಸ ಸೇರಿದಂತೆ ಕೋಲ್ಕತ್ತದ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಶ್ ಬೆಹಾರಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ದೇಬಾಶಿಶ್ ಕುಮಾರ್ ಮತ್ತು ಭವಾನಿಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಹೆಸರನ್ನು ಪ್ರಸ್ತಾಪಿಸಿದ್ದ ಮಿರಾಜ್ ಶಾ ಅವರ ಸ್ಥಳಗಳ ಮೇಲೂ ದಾಳಿ ನಡೆದಿದೆ.

ಇದೇ 23 ಮತ್ತು 29ರಂದು ಮತದಾನ ನಡೆಯುತ್ತಿದ್ದು, ಅದಕ್ಕೂ ಮುನ್ನವೇ ಐಟಿ ದಾಳಿ ನಡೆಸುವ ಮೂಲಕ ಪಕ್ಷವನ್ನು ಬೆದರಿಸುವ ಮತ್ತು ಅಭ್ಯರ್ಥಿಗಳಿಗೆ ಕಿರುಕುಳ ನೀಡುವ ಯತ್ನ ಇದಾಗಿದೆ ಎಂದು ಟಿಎಂಸಿ ಆರೋಪಿಸಿದೆ.

ಕುಮಾರ್ ಅವರ ಮನೆ, ಚುನಾವಣಾ ಕಚೇರಿ, ಇತರ ಸ್ಥಳಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳ ತಂಡ, ಬೆಳಿಗ್ಗೆ 6 ಗಂಟೆಯಿಂದ ಶೋಧ ನಡೆಸುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ, ದಕ್ಷಿಣ ಕೋಲ್ಕತ್ತದ ಎಲ್ಗಿನ್ ರಸ್ತೆಯ ಮಿರಾಜ್ ನಿವಾಸ ಮತ್ತು ಅವರಿಗೆ ಸೇರಿದ ಇತರ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.

ದೇಬಾಶಿಶ್ ಕುಮಾರ್ ಅವರ ಆಪ್ತ ಸಹಾಯಕ, ಟಿಎಂಸಿ ನಾಯಕ ಕುಮಾರ್ ಸಹಾ ಅವರ ಕಾಲಿಘಾಟ್ನಲ್ಲಿರುವ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ನಗರದಾದ್ಯಂತ ಹಲವು ಸ್ಥಳಗಳನ್ನು ಒಳಗೊಂಡಂತೆ ಲೆಕ್ಕವಿಲ್ಲದ ಹಣದ ಹರಿವನ್ನು ಪತ್ತೆಹಚ್ಚಲು ವ್ಯಾಪಕ ಕಾರ್ಯಾಚರಣೆಯ ಭಾಗವಾಗಿ ಈ ದಾಳಿಗಳು ನಡೆದಿವೆ ಎಂದು ಅಧಿಕಾರಿ ಹೇಳಿದ್ದಾರೆ.

ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಕುಮಾರ್ಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಏಪ್ರಿಲ್ 1, 3 ಮತ್ತು 9ರಂದು ಸಾಲ್ಟ್ ಲೇಕ್ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್ನಲ್ಲಿ ಅವರು ವಿಚಾರಣೆಗೆ ಹಾಜರಾಗಿದ್ದರು.

ದಾಳಿಗಳನ್ನು ಖಂಡಿಸಿದ ಟಿಎಂಸಿ ಹಿರಿಯ ನಾಯಕ ಜೈಪ್ರಕಾಶ್ ಮಜುಂದಾರ್, ಟಿಎಂಸಿ ಮತ್ತು ಟಿಎಂಸಿಯೊಂದಿಗೆ ನೇರವಾಗಿ ಸಂಬಂಧವಿಲ್ಲದ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಗಳಿಂದ ನರೇಂದ್ರ ಮೋದಿ-ಅಮಿತ್ ಶಾ ಆಡಳಿತದ ಸೇಡಿನ ಸ್ವಭಾವವು ಬಹಿರಂಗವಾಗಿದೆ ಎಂದು ದೂರಿದ್ದಾರೆ.

ಚುನಾವಣೆಗೆ ಮುನ್ನ, ಕೇಂದ್ರೀಯ ಸಂಸ್ಥೆಗಳು ಪಶ್ಚಿಮ ಬಂಗಾಳದಲ್ಲಿ ಅತಿಯಾಗಿ ಸಕ್ರಿಯವಾಗಿವೆ. ಟಿಎಂಸಿ ಅಭ್ಯರ್ಥಿಗಳಿಗೆ ಕಿರುಕುಳ ಮತ್ತು ಬೆದರಿಕೆ ಹಾಕುವ ಏಕೈಕ ಕಾರ್ಯಸೂಚಿಯಡಿಯಲ್ಲಿ ಕೆಲಸ ಮಾಡುತ್ತಿವೆ. ಬಂಗಾಳದ ಜನರು ಮತ್ತೆ ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂದರು.

ಏಪ್ರಿಲ್ 29 ರಂದು ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ರಾಶ್ಬೆಹಾರಿ ಮತ್ತು ಭವಾನಿಪುರ ಕ್ಷೇತ್ರಗಳೆರಡರಲ್ಲೂ ಮತದಾನ ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.