ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ | ನಾಳೆ ಜಗನ್‌ ಸಂಪುಟ ಪುನಾರಚನೆ: ಹಿಂದುಳಿದವರಿಗೆ ಮಣೆ

Last Updated 10 ಏಪ್ರಿಲ್ 2022, 13:08 IST
ಅಕ್ಷರ ಗಾತ್ರ

ಅಮರಾವತಿ(ಪಿಟಿಐ): ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನಾಳೆ (ಏ.11) ಸಂಪುಟ ಪುನರ್‌ರಚನೆಮಾಡಲಿದ್ದು ಹಿಂದುಳಿದ ವರ್ಗದವರಿಗೆ ಹೆಚ್ಚಿನ ಸ್ಥಾನ ಕಲ್ಪಿಸಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ 24 ಸಚಿವರು ರಾಜೀನಾಮೆ ನೀಡಿದ್ದು ಸೋಮವಾರ ಸಂಪುಟ ಪುನಾರಚನೆಯಾಗಲಿದೆ.ಜಾತಿ ಲೆಕ್ಕಾಚಾರ ಹೊಸ ಸಂಪುಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತಿದೆ.

2024ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಈ ಹಿಂದೆ ಸಚಿವರಾಗಿದ್ದವರಿಗೆ ಪಕ್ಷದ ಜವಾಬ್ದಾರಿ ನೀಡಲಾಗುವುದು ಜಗನ್‌ ಆಪ್ತರು ಹೇಳಿದ್ದಾರೆ.

ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರಿಗೆ 14 ಸಚಿವ ಸ್ಥಾನಗಳನ್ನು ನೀಡಿದ್ದರು. ಈಗ ನೂತನ ಸಂಪುಟದಲ್ಲಿ 21 ಸ್ಥಾನ ನೀಡಲಾಗುವುದು ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಹೊಸ ಸಂಪುಟದಲ್ಲಿ ಅನುಭವಿಗಳು, ಹಿರಿಯರು ಹಾಗೂ ಯುವಕರಿಗೆ ಮಣೆ ಹಾಕಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹಿಂದುಳಿದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ನಡುವೆ ಎಲ್ಲಾ 24 ಸಚಿವರರಾಜೀನಾಮೆ ಅಂಗೀಕಾರ ಆಗಿರುವುದಾಗಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರುಭಾನುವಾರ ತಿಳಿಸಿದ್ದಾರೆ.

2019ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಜಗನ್ ಮೋಹನ್ ರೆಡ್ಡಿ ಅವರು ಎರಡೂವರೆ ವರ್ಷಗಳ ಬಳಿಕ ತಮ್ಮ ಸಂಪುಟವನ್ನು ಪುನರ್ ರಚಿಸುತ್ತೇನೆ ಹಾಗೂ ಹೊಸ ತಂಡ ರಚಿಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದರು. ಈ ಪ್ರಕಾರ 2021ರ ಡಿಸೆಂಬರ್ 8ರಂದು ಜಗನ್ ಅವರು ಸಂಪುಟ ಪುನರ್ ರಚಿಸಬೇಕಿತ್ತು. ಆದರೆ ಕೊರೊನಾ ಸೇರಿ ಇನ್ನಿತರ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT