ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಇಂದು (ಭಾನುವಾರ) ತಮ್ಮ ಮೊದಲ ರಾಜಕೀಯ ಯಾತ್ರೆ ಆರಂಭಿಸಲಿದ್ದಾರೆ. ನಿತೀಶ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಂಗೆಟ್ಟಿರುವ ಜೆಡಿಯು ಪಕ್ಷದ ಪಾಲಿಗೆ ಇದು ಹೊಸ ಭರವಸೆ ಮೂಡಿಸಿದೆ.

ಕಳೆದ ತಿಂಗಳಷ್ಟೇ ಅಧಿಕೃತವಾಗಿ ಪಕ್ಷ ಸೇರಿಸುವ ನಿಶಾಂತ್, ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ನಗರದಿಂದ 'ಸದ್ಭಾವ ಯಾತ್ರೆ' ಆರಂಭಿಸಲಿದ್ದಾರೆ.

ಎರಡು ದಶಕಕ್ಕೂ ಹೆಚ್ಚು ಸಮಯ ಬಿಹಾರ ಮುಖ್ಯಮಂತ್ರಿಯಾಗಿದ್ದ ನಿತೀಶ್ ಅವರು, ಹಲವು ಯಾತ್ರೆಗಳ ಆರಂಭಕ್ಕೆ ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು.

ನಿತೀಶ್ ಅವರು ರಾಜ್ಯಸಭೆ ಪ್ರವೇಶಿಸುವ ಮೂಲಕ, ಸಿಎಂ ಸ್ಥಾನದಿಂದ ಕೆಳಗಿಳಿದದ್ದು ಪಕ್ಷಕ್ಕೆ ಆಘಾತ ನೀಡಿತ್ತು. ರಾಜ್ಯ ರಾಜಕೀಯದಿಂದ ಅವರು ನಿರ್ಗಮಿಸಿದ್ದರಿಂದ, ರಾಜ್ಯದಲ್ಲಿ ಪಕ್ಷದ ಪ್ರಭಾವ ಕಡಿಮೆಯಾಗಬಹುದು ಎಂಬ ಆತಂಕ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಮನೆ ಮಾಡಿತ್ತು. ಇದೀಗ ನಿಶಾಂತ್ ಆಗಮಿಸಿರುವುದು ಹೊಸ ಹುರುಪು ನೀಡಿದೆ.

'ಜೈ ನಿಶಾಂತ್, ಆಗಮನ ಅನಿವಾರ್ಯ' ಎಂಬಿತ್ಯಾದಿ ಬರಹಗಳುಳ್ಳ ಜೆಡಿಯು ಪಕ್ಷದ ಪೋಸ್ಟರ್ಗಳು ಸಾಮಾಜಿಕ ಮಧ್ಯಮಗಳಲ್ಲಿಯೂ ಹರಿದಾಡುತ್ತಿವೆ.

'ಸದ್ಭಾವ ಯಾತ್ರೆ'ಯ ಮುನ್ನಾದಿನ (ಶನಿವಾರ) ಪಶ್ಚಿಮ ಚಂಪಾರಣ್ನ ಪ್ರಧಾನ ಕಚೇರಿ ಬೆಟ್ಟಿಯಾದಲ್ಲಿ ಮಾತನಾಡಿದ್ದ ಜೆಡಿ(ಯು) ವಕ್ತಾರ ಮತ್ತು ಎಂಎಲ್ಸಿ ನೀರಜ್ ಕುಮಾರ್, 'ನಿಶಾಂತ್ ಅವರು ಚಕ್ರವರ್ತಿ ಅಶೋಕನ ಜನ್ಮಭೂಮಿಗೆ ಸೇರಿದವರು. ಅಪ್ಪನ ಹಾಗೆಯೇ ನಿಶಾಂತ್ ಕೂಡ, ಋಷಿ ವಾಲ್ಮೀಕಿಯ ಸ್ಥಳದಿಂದಲೇ ಯಾತ್ರೆ ಶುರು ಮಾಡಲಿದ್ದಾರೆ' ಎಂದು ಹೇಳಿದ್ದರು.

'ವಾಲ್ಮೀಕಿ ಮತ್ತು ಅಶೋಕ ಇಬ್ಬರೂ ತ್ಯಾಗದ ಸಂಕೇತವಾಗಿದ್ದರು. ನಮ್ಮ ನಾಯಕ ನಿತೀಶ್ ಕುಮಾರ್ ಅವರು ಅಧಿಕಾರವನ್ನು ತ್ಯಜಿಸುವಾಗ ಅದೇ ರೀತಿಯ ತ್ಯಾಗದ ಮನೋಭಾವ ಪ್ರದರ್ಶಿಸಿದರು' ಎಂದು ಪ್ರತಿಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.