ಜಮ್ಮು: ಜಮ್ಮುವಿನ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ರಾಮನ್ ಭಲ್ಲಾ ಅವರ ಸಹೋದರ ಸೇರಿದಂತೆ ಅನೇಕರು ಭಾನುವಾರ ಬಿಜೆಪಿ ಸೇರ್ಪಡೆಗೊಂಡರು.

ಭಲ್ಲಾ ಅವರ ಸಹೋದರ ವಿನೋದ್ ಸೇರಿದಂತೆ ಬ್ಲಾಕ್ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ದಿಲೀಪ್ ಕುಮಾರ್ ಹಾಗೂ ಅನೇಕ ಕಾಂಗ್ರೆಸ್ ಮುಖಂಡರನ್ನು ಕೇಂದ್ರ ಸಚಿವ ಜಿ. ಕೃಷ್ಣನ್ ರೆಡ್ಡಿ, ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ಸತ್ ಶರ್ಮಾ ಹಾಗೂ ಇತರ ನಾಯಕರು ಸ್ವಾಗತಿಸಿದರು ಎಂದು ಪಕ್ಷದ ವಕ್ತಾರರು ತಿಳಿಸಿದರು.

‘ಆರ್.ಎಸ್. ಪುರ– ಜಮ್ಮು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭಲ್ಲಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿ ಸೇರಿದ ಎಲ್ಲರೂ ಇದೇ ಪ್ರದೇಶಕ್ಕೆ ಸೇರಿದವರು. ಹೀಗಾಗಿ ಈ ಸೇರ್ಪಡೆಯು ಬಿಜೆಪಿಗೆ ಬಲ ನೀಡಿದೆ’ ಎಂದು ಕೃಷ್ಣನ್ ರೆಡ್ಡಿ ತಿಳಿಸಿದರು.
.J & K Polls 2024: 2 ದಿನಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.