ಕಲಬುರಗಿ: ಭಾರತದ ಮಾಜಿ ಉಪ ಪ್ರಧಾನಿ, ಕೃಷಿ, ಕಾರ್ಮಿಕ, ರೈಲ್ವೆ, ದೂರ ಸಂಪರ್ಕ, ರಕ್ಷಣೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಡಾ. ಬಾಬು ಜಗಜೀವನರಾಂ ಅವರು ಬರದ ನಾಡು ಎಂದು ಕುಖ್ಯಾತಿಯಾಗಿದ್ದ ಭಾರತದಲ್ಲಿ ಕೃಷಿ ಇಳುವರಿ ಹೆಚ್ಚಿಸಲು ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಹಸಿರು ಕ್ರಾಂತಿ ನೆರವೇರಿಸಿದರು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅಭಿಪ್ರಾಯಪಟ್ಟರು.

ಡಾ. ಬಾಬು ಜಗಜೀವನರಾಮ್ ಜಿಲ್ಲಾ ಜಯಂತ್ಯುತ್ಸವ ಸಮಿತಿಯು ನಗರದ ಜಗಜೀವನರಾಮ್ ಅವರ ಪ್ರತಿಮೆ ಎದುರು ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ತೀವ್ರವಾದ ಬರಗಾಲದಿಂದಾಗಿ ಭಾರತದಲ್ಲಿ ಕೃಷಿ ಉತ್ಪನ್ನ ಕಡಿಮೆಯಾಗಿತ್ತು. ಹೀಗಾಗಿ, ದೇಶದ ಪ್ರಧಾನಿ ವಿದೇಶಗಳಿಗೆ ಹೋದಾಗ ಭಿಕ್ಷುಕರ ಪ್ರಧಾನಿ ಬಂದರು ಎಂದು ಅಲ್ಲಿನವರು ಹೀಯಾಳಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿನ ಕೃಷಿ ಉತ್ಪಾದನೆ ಹೆಚ್ಚಿಸುವಂತೆ ಕೃಷಿ ಸಚಿವರಾಗಿದ್ದ ಬಾಬು ಜಗಜೀವನರಾಂ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಭಾಕ್ರಾನಂಗಲ್ ಅಣೆಕಟ್ಟು ನಿರ್ಮಿಸಿ ನೀರಾವರಿ ಕಲ್ಪಿಸಿದರು. ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಅತ್ಯಾಧುನಿಕ ಕ್ರಮಗಳನ್ನು ಕೈಗೊಳ್ಳಲಾಯಿತು’ ಎಂದರು.

‘ಬಾಬೂಜಿ ಅವರು ನಿಜವಾದ ಅರ್ಥದಲ್ಲಿ ರಾಜಕೀಯ ಮುತ್ಸದ್ದಿಯಾಗಿದ್ದರು. ಕಾಸ್ಟ್ ಆಫ್ ಚಾಲೆಂಜ್ ಇನ್ ಇಂಡಿಯಾ ಎಂಬ ಮಹಾನ್ ಕೃತಿಯನ್ನು ರಚಿಸಿದ್ದು, ಮಹಾನ್ ನಾಯಕರ ಸಾಲಿಗೆ ಸೇರುತ್ತಾರೆ. ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆ ಕೊಡಿಸಬೇಕು. ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದಂತೆ ನೋಡಿಕೊಳ್ಳಿ’ ಎಂದು ಹೇಳಿದರು.

ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಾಂಶುಪಾಲ ಮಲ್ಲಿಕಾರ್ಜುನ ಸಾವರಕರ್, ‘ಸ್ವಾತಂತ್ರ್ಯ ಪೂರ್ವದಲ್ಲಿಯೇ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಬಾಬೂಜಿ ಅವರು ಕಾರ್ಮಿಕ ಖಾತೆಯನ್ನು ನಿರ್ವಹಿಸಿದ್ದರು. ಆಗಲೇ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಕಾರ್ಮಿಕ ಪರ 12ಕ್ಕೂ ಅಧಿಕ ಕಾಯ್ದೆಗಳನ್ನು ರೂಪಿಸಿದ್ದರು. ರೈಲ್ವೆ ಕ್ಯಾಂಟೀನ್ಗಳಲ್ಲಿ ದಲಿತ ಸಮುದಾಯದವರಿಗೆ ಉದ್ಯೋಗ ನೀಡಿದರು. ದೂರಸಂಪರ್ಕ ಖಾತೆ ಸಚಿವರಾಗಿದ್ದಾಗ ಎರಡು ಗ್ರಾಮಗಳಿಗೆ ಒಂದರಂತೆ ಅಂಚೆ ಕಚೇರಿಗಳನ್ನು ತೆರೆದರು. ಪೋಸ್ಟ್ಮನ್ಗಳಿಗೆ ಸೈಕಲ್, ಉಣ್ಣೆಯ ಸಮವಸ್ತ್ರಗಳನ್ನು ನೀಡಿದರು. ಅವರ ಅಧಿಕಾರವಧಿಯಲ್ಲಿ ಎಸಿ ಕೋಚ್ಗಳು ಅಳವಡಿಕೆಯಾದವು’ ಎಂದರು.

‘ಕೃಷಿ ತಂತ್ರಜ್ಞ ನಾರ್ಮನ್ ಬೋರ್ಲಾಗ್ ಎಂಬುವವರನ್ನು ಕರೆಸಿ ಹೆಚ್ಚು ಇಳುವರಿಯ ಬೀಜಗಳನ್ನು ಆವಿಷ್ಕರಿಸಿ ಅವುಗಳನ್ನು ರೈತರಿಗೆ ವಿತರಿಸಿದರು. ಹಸಿರು ಕ್ರಾಂತಿಯ ಜೊತೆಗೆ ಕ್ಷೀರ ಕ್ರಾಂತಿ ನೆರವೇರಿಸಿ ಹಾಲಿನ ಉತ್ಪಾದನೆ ಹೆಚ್ಚಿಸಿದರು’ ಎಂದರು.

ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಐಸಿಸಿ ಸದಸ್ಯ ನೀಲಕಂಠರಾವ್ ಮೂಲಗೆ, ಜಿಲ್ಲಾ ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ವಿಜಯಕುಮಾರ ರಾಮಕೃಷ್ಣ, ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮನಿ, ಕಾರ್ಯಾಧ್ಯಕ್ಷ ಶರಣು ಸಗರಕರ್, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ ಅಳೋಳ್ಳಿ, ಕಾರ್ಯಾಧ್ಯಕ್ಷ ಪ್ರದೀಪ ಬಾಚನಳ್ಳಿ, ಮುಖಂಡರಾದ ರಾಜು ವಾಡೇಕರ್, ಗೀತಾ ವಾಡೇಕರ್, ಪರಮೇಶ್ವರ ಖಾನಾಪುರ, ವಿಜಯಕುಮಾರ ಕೊಡಿಯಾಳ, ಗೋಪಾಲರಾವ ಕಟ್ಟಿಮನಿ, ಮಲ್ಲಪ್ಪ ಅಭಿಶ್ಯಾಳ, ಎಚ್.ಎಸ್.ದೀವಕಾರ ಇತರರು ವೇದಿಕೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-34-1539495821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.