ತಿರುಚಿರಾಪಳ್ಳಿ: ನಾನು ಬಾಲ್ಯದಲ್ಲಿ ನಟ–ರಾಜಕಾರಣಿ ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ಅವರ ಮಡಿಲಲ್ಲಿ ಬೆಳೆದವನು. ಆದರೆ ಎಂದಿಗೂ ನಾನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದು ನಟ ಹಾಗೂ ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ ಪರೋಕ್ಷವಾಗಿ ಟಿವಿಕೆ ಮುಖ್ಯಸ್ಥ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೂರ್ವ ತಿರುಚಿರಾಪಳ್ಳಿ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಇನಿಗೋ ಎಸ್.ಇರುದಯರಾಜ್ ಪರವಾಗಿ ಪ್ರಚಾರ ನಡೆಸುವ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ.
.ಮತ್ತೆ ಬದಲಾದ ರಜನಿ, ಕಮಲ್ ಹಾಸನ್ ನಟನೆಯ ತಲೈವರ್ 173’ ಚಿತ್ರದ ನಿರ್ದೇಶಕ.ಯಾವುದೇ ಒತ್ತಡಕ್ಕೆ ತಲೆಬಾಗುವುದಿಲ್ಲ: ಚುನಾವಣಾ ಅಖಾಡದಲ್ಲಿ ವಿಜಯ್ .
'ನಾನು ಕೂಡ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದವನು. ಎಂಜಿಆರ್ ಅವರಿಗೆ ನಾನು ಎಂದರೆ ಬಹಳ ಪ್ರೀತಿ ಇತ್ತು. ಆದರೂ ನಾನು ಆ ನಿಕಟತೆಯನ್ನು ಎಲ್ಲೂ ಪ್ರದರ್ಶಿಸಿಕೊಳ್ಳಲಿಲ್ಲ ಅಥವಾ ದುರುಪಯೋಗಪಡಿಸಿಕೊಳ್ಳಲಿಲ್ಲ' ಎಂದು ಕಮಲ್ ಹೇಳಿದ್ದಾರೆ.

ಇತ್ತೀಚೆಗೆ ನಟ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿ ತಮ್ಮನ್ನು ಎಂಜಿಆರ್ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ಕಮಲ್ ಹಾಸನ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
.ರೈತರ ಸಾಲಮನ್ನಾ ಸೇರಿ ಹಲವು ಘೋಷಣೆ ಮಾಡಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ .ರಾಜಕೀಯಕ್ಕೆ ಅಡ್ಡಿಯಾದರೆ ಸಿನಿಮಾ ತ್ಯಜಿಸುವೆ: ಕಮಲ್ ಹಾಸನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.