ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮೈಯಂ(ಎಂಎನ್ಎಂ) ಪಕ್ಷವು, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷದೊಂದಿಗೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ, ‘ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ. ಮೌರ್ಯ ಸೇರಿದಂತೆ ಪಕ್ಷದ ಹಿರಿಯ ಸಹದ್ಯೋಗಿಗಳೊಂದಿಗೆ ಎಂಎನ್ಎಂ ಮೈತ್ರಿ ಬಲಪಡಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಿ, ಆ ವಿವರಗಳನ್ನು ಡಿಎಂಕೆ ಪಕ್ಷದ ಖಜಾಂಚಿ ಟಿ.ಆರ್. ಬಾಲು ನೇತೃತ್ವದ ಸಮಿತಿಗೆ ನೀಡಿದ್ದೇನೆ’ ಎಂದು ತಿಳಿಸಿದರು.

ಇಲ್ಲಿನ ಅಣ್ಣಾ ಅರಿವಲಯಂನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣಾಚಲಂ, ‘ಎಂಎನ್ಎಂ– ಡಿಎಂಕೆ ಮೈತ್ರಿಯನ್ನು ಬಲಗೊಳಿಸುವುದು ಹೇಗೆ ಎಂಬುದರ ಕುರಿತು ಬುಧವಾರ ಡಿಎಂಕೆ ಸೀಟು ಹಂಚಿಕೆ ಸಮಿತಿ ಮತ್ತು ಎಂಎನ್ಎಂ ಸಮಿತಿ ನಡುವೆ ಚರ್ಚೆ ನಡೆಯಿತು. ಈ ಬಗ್ಗೆ ನಾವು ಕೆಲವು ದತ್ತಾಂಶಗಳನ್ನು ಒದಗಿಸಿದ್ದೇವೆ. ಈ ವಿವರಗಳನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಎದುರು ಪ್ರಸ್ತುತಪಡಿಸುವುದಾಗಿ ಡಿಎಂಕೆ ನಾಯಕರು ತಿಳಿಸಿದ್ದಾರೆ’ ಎಂದು ಹೇಳಿದರು.

ನಮ್ಮ ಪಕ್ಷದ ನಾಯಕ ಕಮಲ ಹಾಸನ್ ಅವರ ನಿರ್ದೇಶನದಂತೆ, ಮೈತ್ರಿ ಕುರಿತ ದತ್ತಾಂಶಗಳನ್ನು ಡಿಎಂಕೆ ಸಮಿತಿಗೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ತಿಳಿಸಿದರು.

’ಎಂಎನ್ಎಂ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸುತ್ತಿದೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅರುಣಾಚಲಂ, ‘ಇಂದು ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಆ ವಿವರಗಳನ್ನು ನಾವು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.