ಕಠ್ಮಂಡು: ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಭಾನುವಾರ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು 32ನೇ ಬಾರಿಗೆ ಏರುವ ಮೂಲಕ ತಮ್ಮದೇ ವಿಶ್ವ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ.

56 ವರ್ಷದ ಅನುಭವಿ ಪರ್ವತಾರೋಹಿ ಭಾನುವಾರ ಬೆಳಿಗ್ಗೆ 10:12ಕ್ಕೆ 8,849 ಮೀಟರ್ ಎತ್ತರದ ಶಿಖರವನ್ನು ಏರಿದ್ದಾರೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

‘14 ಪೀಕ್ಸ್ ಎಕ್ಸ್ಪೆಡಿಶನ್’ ಸಂಸ್ಥೆ ನಿರ್ವಹಿಸುವ ಪರ್ವತಾರೋಹಣದ ನೇತೃತ್ವ ವಹಿಸಿದ್ದರು ಎಂದು ಅದು ತಿಳಿಸಿದೆ.

ಎವರೆಸ್ಟ್ ಬೇಸ್ ಕ್ಯಾಂಪ್ನಲ್ಲಿರುವ ಇಲಾಖೆಯ ಕ್ಷೇತ್ರ ಕಚೇರಿಯಿಂದ ಯಶಸ್ವಿ ಆರೋಹಣವನ್ನು ದೃಢಪಡಿಸಲಾಗಿದೆ ಎಂದು ‘ದಿ ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.

ಪ್ರವಾಸೋದ್ಯಮ ಇಲಾಖೆಯು ಶೆರ್ಪಾ ಅವರನ್ನು ಅಭಿನಂದಿಸಿದೆ. ಅವರ ಸಾಧನೆಯು ನೇಪಾಳದ ಪರ್ವತಾರೋಹಣ ವಲಯ ಮತ್ತು ಅದರ ಅಂತರರಾಷ್ಟ್ರೀಯ ಪ್ರೊಫೈಲ್ಗೆ ಗಮನಾರ್ಹ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.

1970ರ ಜನವರಿಯಲ್ಲಿ ಕೋಶಿ ಪ್ರಾಂತ್ಯದ ಸೋಲುಖುಂಬು ಜಿಲ್ಲೆಯ ಹಳ್ಳಿಯಲ್ಲಿ ಜನಿಸಿದ ಕಾಮಿ ರೀಟಾ, 1992ರಲ್ಲಿ ವೃತ್ತಿಪರ ಪರ್ವತಾರೋಹಿಯಾಗಿ ಈ ಶಿಖರ ಏರಲು ಆರಂಭಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದ್ದರು.

2025ರ ಮೇ 27ರಂದು ತಮ್ಮ 31ನೇ ಎವರೆಸ್ಟ್ ಆರೋಹಣವನ್ನು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.