ಕನಕಗಿರಿ: ನಾಲ್ಕು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಇಲ್ಲಿನ ಸಿಐಟಿಯು ತಾಲ್ಲೂಕು ಸಮಿತಿ ಕರಾಳ ದಿನ ಆಚರಿಸಿತು.

ಸಿಐಟಿಯು ಜಿಲ್ಲಾ ಕೋಶಾಧ್ಯಕ್ಷೆ ಲಕ್ಷ್ಮೀದೇವಿ ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಹಾಗೂ ಮಾಲೀಕರ ಪರ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

‘ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಕಳೆದ ಫೆ.12ರಂದು ಅಖಿಲ ಭಾರತ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಆಯೋಜಿಸಿದ್ದ ಸಾರ್ವತ್ರಿಕ ಮುಷ್ಕರ ಐತಿಹಾಸಿಕವಾಗಿದೆ. ಈ ಹೋರಾಟದ ಗಂಭೀರತೆ ಅರಿಯದ ಕೇಂದ್ರ ಸರ್ಕಾರ ಕಾನೂನುಗಳ ಜಾರಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಕಾರ್ಮಿಕರ ಸಂಘಟನೆಗಳ ಜತೆಗೆ ಚರ್ಚೆ ಸಹ ಮಾಡಿಲ್ಲ’ ಎಂದರು.

‘ಕಾರ್ಮಿಕರ ಹೋರಾಟಕ್ಕೆ ಮಣಿಯದ ಕೇಂದ್ರದ ವಿರುದ್ದ ದೇಶದಾದ್ಯಂತ ಎಲ್ಲಾ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ’ ಎಂದರು.

ಪ್ರಮುಖರಾದ ಮುಖಂಡ ಮಲ್ಲಪ್ಪ ಮ್ಯಾಗಡೆ, ನಿಂಗಪ್ಪ, ಶಿವು, ಮರಿಯಪ್ಪ, ಮೌಲಹುಸೇನ, ಹೊನ್ನೂರುಸಾಬ, ಪರಶುರಾಮ, ರಮೇಶ್, ಹನುಮಂತ, ಬಾಳಪ್ಪ ಹುಲಿಹೈದರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-35-1612712379

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.