ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆ ಸೇರಿದಂತೆ ಈ ದಿನದ 10 ಪ್ರಮುಖ ಸುದ್ದಿಗಳು ಇಲ್ಲಿವೆ....

ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಿರುವುದರಿಂದ ಎರಡನೇ ಸುತ್ತಿನ ಮಾತುಕತೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಅಮೆರಿಕವು ಮಾತುಕತೆಗೆ ಉತ್ಸುಕತೆ ತೋರಿದೆಯಾದರೂ, ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
.ಅಮೆರಿಕ ಜತೆ ಮಾತುಕತೆಗೆ ಇರಾನ್ ಹಿಂದೇಟು: ಹೊರ್ಮುಜ್ ನಿರ್ಬಂಧ ಮುಂದುವರಿಕೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಂಗಳವಾರ ಉದ್ಘಾಟನೆಗೊಳ್ಳಬೇಕಿದ್ದ ರಾಜಸ್ಥಾನದ ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣಾ ಘಟಕವೊಂದರಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದೆ.
.ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಘಟಕಕ್ಕೆ ಬೆಂಕಿ: ಕಾರ್ಯಕ್ರಮ ಮುಂದೂಡಿಕೆ.
ಕೌಟುಂಬಿಕ ಕಾರಣದಿಂದ ವ್ಯಕ್ತಿಯೊಬ್ಬ ತನ್ನ ಏಳು ಮಕ್ಕಳು ಸೇರಿದಂತೆ ಎಂಟು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ ಅಮೆರಿಕದ ದಕ್ಷಿಣ ಭಾಗದ ಲೂಸಿಯಾನದಲ್ಲಿ ನಡೆದಿದೆ.
.ಅಮೆರಿಕ: ತನ್ನದೇ 7 ಮಕ್ಕಳನ್ನು ಗುಂಡಿಕ್ಕಿ ಕೊಂದ ವ್ಯಕ್ತಿ.
ಕಲಬುರಗಿ, ಹಾಸನ, ಉಡುಪಿ ಸೇರಿದಂತೆ 11 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏ.21ರಂದು ಗುಡುಗು ಸಹಿತ ಹಗುರ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
.Karnataka Rains: 11 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಮಂಗಳವಾರದಿಂದ (ಏ.21) ಆರಂಭವಾಗಲಿದೆ.
.ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ: ಪ್ರಕ್ರಿಯೆ ಇಂದು ಆರಂಭ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆಯಲಿದ್ದು. ಮುಕ್ತ, ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
.ಪಶ್ಚಿಮ ಬಂಗಾಳದಲ್ಲಿ ನ್ಯಾಯಯುತ, ಪಾರದರ್ಶಕ ಚುನಾವಣೆ ನಡೆಸುತ್ತೇವೆ: ಸಿಇಸಿ .
ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.
.ಭಾರತ–ದಕ್ಷಿಣ ಕೊರಿಯಾ ಒಪ್ಪಂದ: ಮೋದಿ–ಮ್ಯುಂಗ್ ಮಾತುಕತೆಯ ಮುಖ್ಯಾಂಶಗಳು ಇಲ್ಲಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಕುರಿತ ಪ್ರಕರಣದ ವಿಚಾರಣೆಯಿಂದ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ಸೋಮವಾರ ಹಿಂದೆ ಸರಿದಿದ್ದಾರೆ.
.ರಾಹುಲ್ ಗಾಂಧಿ ದ್ವಿಪೌರತ್ವ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ.
ತೆಲುಗು ನಟ ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ‘ರಾಕಾ’ ಆಗಿ ತೆರೆ ಮೇಲೆ ಬರಲಿದ್ದಾರೆ. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿ ಅವರಿಲ್ಲಿ ಕಾಣಿಸಿಕೊಂಡಿದ್ದು ಈ ಲುಕ್ಗಾಗಿ ಅಲ್ಲು ಪ್ರತಿ ದಿನ ಮೂರ್ನಾಲ್ಕು ಗಂಟೆ ವ್ಯಯಿಸಿದ್ದಾರೆ ಎಂದಿದೆ ಚಿತ್ರತಂಡ.
.ಮೇಕಪ್ಗೇ ಮೂರ್ನಾಲ್ಕು ಗಂಟೆ ವ್ಯಯಿಸಿದ ಅಲ್ಲು ಅರ್ಜುನ್!.
ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪಾಯಿಂಟ್ ಪಟ್ಟಿಯ ಮಧ್ಯದಲ್ಲಿವೆ. ಎರಡೂ ತಂಡಗಳು ಮಂಗಳವಾರ ಹೈದರಾಬಾದಿನಲ್ಲಿಮುಖಾಮುಖಿ ಆಗಲಿದ್ದು, ಸನ್ರೈಸರ್ಸ್ ತಂಡವು ತವರಿನ ಅಂಗಳದಲ್ಲಿ ಆಡುವ ಲಾಭವನ್ನು ಪಡೆಯಲು ಯತ್ನಿಸಲಿದೆ.
.IPL 2026 SRH vs DC: ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.